Latest Kannada Nation & World
ಅಂದು ಪುಟ್ಟಣ್ಣ ಕಣಗಾಲ್, ಇಂದು ಕೋಡ್ಲು ರಾಮಕೃಷ್ಣ; ಕಥೆ- ಕಾದಂಬರಿಗಳಿಗೆ ಜೀವ ತುಂಬಿದ ನಿರ್ದೇಶಕರಿವರು -ಚೇತನ್ ನಾಡಿಗೇರ್ ಬರಹ

ಕನ್ನಡದ ಸಹೃದಯ ನಿರ್ದೇಶಕ ಪರಂಪರೆ
ಪುಟ್ಟಣ್ಣ ಕಣಗಾಲ್, ಗಿರೀಶ್ ಕಾಸರವಳ್ಳಿ, ಕೋಡ್ಲು ರಾಮಕೃಷ್ಣ ಅಷ್ಟೇ ಅಲ್ಲ, ಕನ್ನಡದಲ್ಲಿ ಕಥೆ-ಕಾದಂಬರಿಗಳನ್ನಾಧರಿಸಿ ಚಿತ್ರ ಮಾಡುವವರ ಸಂಖ್ಯೆ ದೊಡ್ಡದೇ ಇದೆ. ದೊರೈ-ಭಗವಾನ್ ಅವರು ಕನ್ನಡದ ಹಲವು ಮಹತ್ವದ ಕೃತಿಗಳನ್ನು ತೆರೆಗೆ ತಂದಿದ್ದರು. ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ, ಟಿ.ಎಸ್. ನಾಗಾಭರಣ, ಪಿ. ಶೇಷಾದ್ರಿ, ಕೆ.ವಿ. ಜಯರಾಂ, ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಡಾ. ಬರಗೂರು ರಾಮಚಂದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಭಾರ್ಗವ, ವಿಶಾಲ್ ರಾಜ್ ಮುಂತಾದವರು ಅನೇಕ ಪ್ರಮುಖ ಕೃತಿಗಳನ್ನು ತೆರೆಗೆ ತಂದಿದ್ದಾರೆ.