Latest Kannada Nation & World
ಅಂಬೇಡ್ಕರ್ ವಿವಾದ; ಸಂಸತ್ ಆವರಣದಲ್ಲಿ ಹೈಡ್ರಾಮಾ, ರಾಹುಲ್ ಗಾಂಧಿ ತಳ್ಳಿದ್ದರಿಂದ ಐಸಿಯು ಸೇರಿದ ಬಿಜೆಪಿ ಸಂಸದ ಮುಕೇಶ್ ರಜಪೂತ್, ಆರೋಪ
Ambedkar row: ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿಚಾರವಾಗಿ ಶುರುವಾದ ರಾಜಕೀಯ ಕೆಸರೆರಚಾಟ ಪ್ರತಿಪಕ್ಷಗಳನ್ನು ಸಂಸತ್ತಿನ ‘ಮಕರ ದ್ವಾರ’ದ ಮೇಲೆ ನಿಂತು ಪ್ರತಿಭಟಿಸುವಂತೆ ಮಾಡಿದೆ. ಇದರಿಂದಾಗಿ ಸಂಸತ್ ಆವರಣದಲ್ಲಿ ರಾಜಕೀಯ ಹೈಡ್ರಾಮಾನ ನಡೆದಿದ್ದು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ತಳ್ಳುವಿಕೆಯ ಪರಿಣಾಮವಾಗಿ ಇಬ್ಬರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದರು ಗಾಯಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಯಗೊಂಡಿರುವ ಬಿಜೆಪಿ ಸಂಸದರ ಪೈಕಿ ಮುಕೇಶ್ ರಜಪೂತ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದು, ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ತಿಳಿಸಿದೆ.