Astrology

ಅನಾವಶ್ಯಕವಾಗಿ ಬೇರೆಯವರ ವಿಚಾರದಲ್ಲಿ ತಲೆ ಹಾಕದಿರಿ, ಉದ್ಯೋಗ ಬದಲಿಸಲಿದ್ದೀರಿ; ಮೇಷದಿಂದ ಕಟಕವರೆಗೆ ವಾರ ಭವಿಷ್ಯ

Share This Post ????

ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ವಾರ ಭವಿಷ್ಯ ಇಲ್ಲಿದೆ.

ಅನಾವಶ್ಯಕವಾಗಿ ಬೇರೆಯವರ ವಿಚಾರದಲ್ಲಿ ತಲೆ ಹಾಕದಿರಿ, ಉದ್ಯೋಗ ಬದಲಿಸಲಿದ್ದೀರಿ; ಮೇಷದಿಂದ ಕಟಕವರೆಗೆ ವಾರ ಭವಿಷ್ಯ

ಅನಾವಶ್ಯಕವಾಗಿ ಬೇರೆಯವರ ವಿಚಾರದಲ್ಲಿ ತಲೆ ಹಾಕದಿರಿ, ಉದ್ಯೋಗ ಬದಲಿಸಲಿದ್ದೀರಿ; ಮೇಷದಿಂದ ಕಟಕವರೆಗೆ ವಾರ ಭವಿಷ್ಯ

ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಜೂನ್ 22ರ ಭಾನುವಾರದಿಂದ 28ರ ಶನಿವಾರದವರಿಗೆ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ವಾರ ಭವಿಷ್ಯ ಇಲ್ಲಿದೆ.

ಮೇಷ ರಾಶಿ

ಆತುರ ನಡೆ ನುಡಿ ಸಂದಿಗ್ದತೆಯನ್ನು ಸೃಷ್ಟಿಸುತ್ತದೆ. ಹಿರಿಯರ ಸಲಹೆಯಂತೆ ದೃಢವಾದ ನಿರ್ಧಾರ ತೆಗೆದುಕೊಳ್ಳಲಿ ಪ್ರಯತ್ನಿಸುವಿರಿ. ದುಡುಕಿನಿಂದ ಹಣಕಾಸಿನ ಕೊರತೆ ಎದುರಿಸುವಿರಿ. ನಿತ್ಯಜೀವನದಲ್ಲಿ ಅಲ್ಪಮಟ್ಟದ ಕಷ್ಟನಷ್ಟಕ್ಕೆ ಒಳಗಾಗುವಿರಿ. ವಿದ್ಯಾರ್ಥಿಗಳು ಆತಂಕದ ಪರಿಸ್ಥಿತಿಯಲ್ಲಿ ಆತ್ಮವಿಶ್ವಾಸದಿಂದ ವರ್ತಿಸುತ್ತಾರೆ. ಉದ್ಯೋಗದಲ್ಲಿ ವಿರೋಧಿಗಳ ಅಸಹಕಾರವನ್ನು ಎದುರಿಸಬೇಕಾಗುತ್ತದೆ. ನಿಮ್ಮ ಪಾಲಿಗೆ ಸೇರಿದ ಜಮೀನನ್ನು ಮಗಳಿಗೆ ಕಾಣಿಕೆಯನ್ನಾಗಿ ನೀಡುವಿರಿ. ಉದ್ಯೋಗವನ್ನು ಬದಲಿಸುವ ಸಾಧ್ಯತೆಗಳಿವೆ. ನಿಮ್ಮ ಆರೋಗ್ಯವು ಕ್ರಮೇಣವಾಗಿ ಸಹಜ ಸ್ಥಿತಿಗೆ ಮರಳುತ್ತದೆ. ನಿಮ್ಮ ಶುಭ್ರವಾದ ಮನಸ್ಸನ್ನು ಎಲ್ಲರೂ ಮೆಚ್ಚುತ್ತಾರೆ. ಸಮಾಜದಲ್ಲಿ ಉನ್ನತ ಗೌರವ ಲಭಿಸುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ವರಮಾನ ಇರುತ್ತದೆ. ವಿಶ್ರಾಂತಿ ಇಲ್ಲದ ದುಡಿಮೆ ಇರುತ್ತದೆ. ಅನಾವಶ್ಯಕವಾಗಿ ಬೇರೆಯವರ ವಿಚಾರದಲ್ಲಿ ಮದ್ಯಸ್ಥಿಕೆ ವಹಿಸುವುದಿಲ್ಲ.

ಪರಿಹಾರ: ಕೆಂಪು ಹೂವಿನ ಗಿಡಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕೇಸರಿ ಬಣ್ಣ

ವೃಷಭ ರಾಶಿ

ಕರಿದ ಪದಾರ್ಥಗಳಿಂದ ದೂರವಿರಲು ಪ್ರಯತ್ನಿಸುವಿರಿ. ಸರಳವಾದ ಆಹಾರ ಮತ್ತು ದೈಹಿಕ ಪರಿಶ್ರಮ ಉತ್ತಮ ಆರೋಗ್ಯ ನೀಡುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯುವಿರಿ. ಕುಟುಂಬದಲ್ಲಿ ಒಮ್ಮತ ಕಾಣದೆ ಹೋದಾಗ ಮೌನದಿಂದ ವರ್ತಿಸುವಿರಿ. ಆಪತ್ತನ್ನು ಲೆಕ್ಕಿಸದೆ ಆರಂಭಿಸಿದ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವ ಸಾಧ್ಯತೆಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಗುರಿ ತಲುಪಲು ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ಕುಟುಂಬದ ಹಣಕಾಸಿನ ವಿವಾದವು ದೂರವಾಗುತ್ತವೆ. ವಿದೇಶ ಪ್ರಯಾಣದ ಸೂಚನೆಗಳಿವೆ. ಸಾಲದ ವ್ಯವಹಾರದಲ್ಲಿ ವಿವಾದ ಎದುರಿಸುತಿವಿರಿ. ನಿಮ್ಮ ತಾಯಿ ಅಥವ ತಂದೆಯವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಲಿದೆ, ವೈಧ್ಯರ ಸಲಹೆಯಂತೆ ದೇಹದ ತೂಕವನ್ನು ಕಡಿಮೆಗೊಳಿಸುವಿರಿ. ಬಂದು ಬಳಗದವರೊಡನೆ ಉತ್ತಮ ಸಂಪರ್ಕ ಗಳಿಸಲು ಪ್ರಯತ್ನಿಸುವಿರಿ.

ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಮಿಥುನ ರಾಶಿ

ಆತ್ಮಸ್ಥೈರ್ಯದ ಕೊರತೆ ಇರುತ್ತದೆ. ಇದರಿಂದ ಒಮ್ಮೆ ತೆಗೆದುಕೊಳ್ಳುವ ನಿರ್ಧಾರಗಳನ್ನು ಬದಲಿಸುವಿರಿ. ಸ್ವತಂತ್ರವಾಗಿ ಯಾವುದೆ ಕೆಲಸವನ್ನು ಮಾಡಲಾಗುವುದಿಲ್ಲ. ಆತ್ಮೀಯರ ಸಹಾಯ ಸದಾಕಾಲ ದೊರೆಯಲಿದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಮಾತಾಡುವುದನ್ನು ಕಡಿಮೆ ಮಾಡಿ ಮೌನದಿಂದ ಕೆಲಸ ಸಾಧಿಸುವಿರಿ. ಅನಗತ್ಯ ಖರ್ಚು ವೆಚ್ಚಗಳನ್ನು ನಿರಯಂತ್ರಿಸುವಿರಿ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಗಮನವಹಿಸುವಿರಿ. ಉದ್ಯೋಗದಲ್ಲಿ ನಿಮ್ಮ ನಿರೀಕ್ಷೆಯಂತೆ ಕೆಲಸ ಕಾರ್ಯಗಳು ಸಾಗಲಿವೆ. ಸ್ವಂತ ಉದ್ದಿಮೆ ಇದ್ದಲ್ಲಿ ಯಶಸ್ಸು ಅಪಯಶಸ್ಸು ಸರಿ ಸಮಾನವಾಗಿ ಇರುತ್ತದೆ. ವಿದ್ಯಾರ್ಥಿಗಳು ಧೈರ್ಯದಿಂದ ಶಿಕ್ಷಕರೊಂದಿಗೆ ಮಾತನಾಡಬೇಕು. ಹೆಚ್ಚಿನ ವೇತನಕ್ಕಾಗಿ ಉದ್ಯೋಗವನ್ನು ಬದಲಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ಇರುವುದಿಲ್ಲ. ಸಾಲವಾಗಿ ಹಣ ಕೊಡುವುದು ಅಥವಾ ಪಡೆಯುವುದರಿಂದ ಆತ್ಮೀಯರು ನಿಮ್ಮ ದೂರವಾಗಲಿದ್ದಾರೆ. ನಿಮ್ಮ ಪ್ರಯತ್ನದಿಂದಾಗಿ ಸೋದರಿಯ ವಿವಾಹ ನಿಶ್ಚಿಯವಾಗಿರುತ್ತದೆ.

ಪರಿಹಾರ: ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕೆಂಪು ಬಣ್ಣ

ಕಟಕ ರಾಶಿ

ದೈನದಿನ ಜೀವನದಲ್ಲಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುವಿರಿ. ಸೋಲಿನ ಭಯವಿಲ್ಲದೆ ಭೂ ವ್ಯವಹಾರ ಒಂದರಲ್ಲಿ ದಿಟ್ಟ ನಿರ್ಧಾರವನ್ನು ಕೈಗೊಳ್ಳುವಿರಿ. ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಇರುತ್ತದೆ. ನಿಮ್ಮ ನಿರ್ಧಾರಗಳು ಮಕ್ಕಳ ಜೀವನದಲ್ಲಿ ಶುಭ ಫಲಗಳನ್ನು ನೀಡುತ್ತವೆ. ಹೆಚ್ಚಿನ ನಿರೀಕ್ಷೆಯಿಂದ ವಾಸ ಸ್ಥಳವನ್ನು ಬದಲಿಸುವಿರಿ. ಹಳೆಯ ವಾಹನವನ್ನು ಆತ್ಮೀಯರಿಗೆ ನೀಡಿ ಹೊಸ ಐಷಾರಾಮಿ ವಾಹನವನ್ನು ಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ಇರದೆ ಹೋದರೂ ನಷ್ಟವಾಗದು. ವಿದ್ಯಾರ್ಥಿಗಳು ಹಠದ ಸ್ವಭಾವವನ್ನು ತೊರೆದು ಹಿರಿಯರ ಮಾತನ್ನು ಗಮನಿಸಬೇಕು. ಕೀಲು ನೋವಿನ ತೊಂದರೆ ಬಹುವಾಗಿ ಕಾಡುತ್ತದೆ. ಕೌಟುಂಬಿಕ ವಿವಾದವು ಸುಖಾಂತ್ಯ ಗೊಳ್ಳಲಿದೆ. ಪ್ರವಾಸದ ವೇಳೆ ನಿಮ್ಮ ಅಮೂಲ್ಯವಾದ ವಸ್ತುವೊಂದು ಕಳುವಾಗಬಹುದು ಎಚ್ಚರಿಕೆ ಇರಲಿ. ಶೀತದ ತೊಂದರೆ ಇರುತ್ತದೆ.

ಪರಿಹಾರ: ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ಬರಹ: ಎಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!