Latest Kannada Nation & World
ಅರ್ಜುನ್ ಜನ್ಯಾ-ಶಿವರಾಜ್ಕುಮಾರ್ ಸಿನಿಮಾ ಸೆಟ್ಗೆ ಸ್ವಾಮೀಜಿ ಭೇಟಿ; 45 ಚಿತ್ರಕ್ಕೆ ಸಿಕ್ತು ಆಧ್ಯಾತ್ಮಿಕ ಗುರುಗಳ ಆಶೀರ್ವಾದ

ಚಿತ್ರದಲ್ಲೂ ಆಧ್ಯಾತ್ಮಿಕ ಅಂಶಗಳಿವೆ ಎಂದ ನಿರ್ಮಾಪಕ ರಮೇಶ್ ರೆಡ್ಡಿ
ಆನಂದಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ಅವರು 45 ಸಿನಿಮಾ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿ ಸ್ವಲ್ಪ ಸಮಯ ಶೂಟಿಂಗ್ ವೀಕ್ಷಿಸಿದ್ದಾರೆ. ಗುರುಗಳು ಹರಿಧಾಮ ಸಾಯಿ ಟ್ರಸ್ಟ್ ಮೂಲಕ ಪ್ರತಿದಿನ ಸಾವಿರಾರು ಜನರಿಗೆ ಅನ್ನದಾನ ಮಾಡುತ್ತಾ ಬಂದಿದ್ದಾರೆ. 45 ಸಿನಿಮಾದಲ್ಲಿ ಆಧ್ಯಾತ್ಮಕ ಗುರುಗಳಿಗೆ ಸಂಬಂಧಿಸಿದ ಕೆಲವೊಂದು ದೃಶ್ಯಗಳಿದ್ದು ಬಹುಶ: ಅವರೂ ಕೂಡಾ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರಬಹುದು ಎನ್ನಲಾಗುತ್ತಿದೆ. ಗುರುಗಳು ಸೆಟ್ಗೆ ಭೇಟಿ ನೀಡಿದ ಸಮಯದಲ್ಲಿ ಶಿವರಾಜ್ಕುಮಾರ್, ಪತ್ನಿ ಗೀತಾ, ನಟ ಉಪೇಂದ್ರ, ರಾಜ್ ಬಿ ಶೆಟ್ಟಿ, ಸಾಹಸ ನಿರ್ದೇಶಕ ರವಿವರ್ಮ, ಅರ್ಜುನ್ ಜನ್ಯಾ, ನಿರ್ಮಾಪಕ ರಮೇಶ್ ರೆಡ್ಡಿ ಸೇರಿದಂತೆ ಚಿತ್ರತಂಡದ ಬಹುತೇಕ ಸದಸ್ಯರು ಉಪಸ್ಥಿತರಿದ್ದರು.