Latest Kannada Nation & World
ಉದ್ಯೋಗಿಗಳಿಗೆ, ಸರ್ಕಾರಕ್ಕೆ 23 ಲಕ್ಷ ಪಿಎಫ್ ವಂಚನೆ ಪ್ರಕರಣ; ಕೊನೆಗೂ ಮೌನ ಮುರಿದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ
ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ-2 ಮತ್ತು ಕೆಆರ್ ಪುರಂನ ವಸೂಲಾತಿ ಅಧಿಕಾರಿ ಷಡಕ್ಷರ ಗೋಪಾಲ್ ರೆಡ್ಡಿ ಅವರು ಉತ್ತಪ್ಪ ಬಂಧನಕ್ಕೆ ವಾರೆಂಟ್ ಹೊರಡಿಸಿದ್ದರು. ಸುಸ್ತಿದಾರ ಉತ್ತಪ್ಪನಿಂದ 23,36,602 ರೂಪಾಯಿಗಳನ್ನು ವಸೂಲಿ ಮಾಡಬೇಕು ಎಂದು ವಾರೆಂಟ್ನಲ್ಲಿ ಉಲ್ಲೇಖಿಸಿದ್ದರು. ಮಾಜಿ ಕ್ರಿಕೆಟಿಗ ಇಂದಿರಾನಗರ ಮೂಲದ ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾಗಿದ್ದ ಅವರು, ಇದೀಗ ಈ ಬಗ್ಗೆ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.