Latest Kannada Nation & World
ರಣಜಿ ಟ್ರೋಫಿ ಫೈನಲ್ನಲ್ಲಿ ಕರುಣ್ ನಾಯರ್ ಶತಕ ಬಾರಿಸಿ 9 ಬೆರಳು ತೋರಿಸಿ ಸಂಭ್ರಮ; ಅದಕ್ಕಿಲ್ಲಿದೆ ವಿಶೇಷ ಕಾರಣ

ದೇಶೀಯ ಕ್ರಿಕೆಟ್ನಲ್ಲಿ ನಾಯರ್ ಅಬ್ಬರ
ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರ ನಂತರ ಕರುಣ್ ನಾಯರ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿದ ಭಾರತದ ಎರಡನೇ ಆಟಗಾರ. 2017ರಲ್ಲಿ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡ ನಾಯರ್, 6 ಟೆಸ್ಟ್, 2 ಏಕದಿನಗಳಲ್ಲಿ ಕಣಕ್ಕಿಳಿದಿದ್ದಾರೆ. 2024-25ರ ಋತುವಿನ ದೇಶೀಯ ಕ್ರಿಕೆಟ್ನ ಎಲ್ಲಾ ಸ್ವರೂಪಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. 33 ವರ್ಷದ ಆಟಗಾರ ನಿರಂತರವಾಗಿ ಬ್ಯಾಟ್ನಿಂದ ರನ್ ಸುನಾಮಿ ಹರಿಸುತ್ತಿರುವ ಅವರು, ವಿಜಯ್ ಹಜಾರೆಯಲ್ಲಿ ಆಡಿದ 9 ಪಂದ್ಯಗಳಲ್ಲಿ 389.50ರ ಸರಾಸರಿಯಲ್ಲಿ 779 ರನ್ ಗಳಿಸಿದ್ದರು. ಐದು ಶತಕ, ಒಂದು ಅರ್ಧಶತಕವನ್ನೂ ಸಿಡಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ 6 ಪಂದ್ಯಗಳಲ್ಲಿ 42.5ರ ಸರಾಸರಿಯಲ್ಲಿ 255 ರನ್ ಗಳಿಸಿದ್ದರು.