Latest Kannada Nation & World
ಬಿಗ್ ಬಾಸ್ ಟ್ರೋಫಿ ಗೆದ್ದ ಬೆನ್ನಲ್ಲೇ, ಹನುಮಂತ ಲಮಾಣಿ ಮನೆಯಲ್ಲಿ ನೀರವ ಮೌನ; ಕುಟುಂಬದ ಆಪ್ತನನ್ನೇ ಕಳೆದುಕೊಂಡ ಹಳ್ಳಿ ಹಕ್ಕಿ

ಬಿಗ್ ಬಾಸ್‌ನಲ್ಲಿ ಹನುಮಂತ ಗೆದ್ದ ಬೆನ್ನಲ್ಲೇ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾದಲ್ಲಿ ಅವರ ಆಪ್ತರು, ಸ್ನೇಹಿತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ, ಅದ್ಯಾವಾಗ ಹನುಮಂತು ಊರಿಗೆ ಬರ್ತಾನೆ, ಅವನನ್ನು ಅದ್ಯಾವಾಗ ಭೇಟಿ ಮಾಡಿ, ಸಂಭ್ರಮಾಚರಣೆ ಮಾಡುವುದು ಎಂದೆಲ್ಲ ಸಿದ್ಧತೆ ಮಾಡಿದ್ದರು. ಅದರಂತೆ, ಸುತ್ತ ಮುತ್ತಲಿನ ಗ್ರಾಮಗಳ ಸ್ನೇಹಿತರು ಚಿಲ್ಲೂರು ಬಡ್ನಿಗೆ ಆಗಮಿಸಿದ್ದರು. ಆದರೆ, ಇದೀಗ ಹನುಮಂತು ಅವರ ಚಿಕ್ಕಪ್ಪ, ದೇವಪ್ಪ ಇಂದು (ಜ. 27) ನಿಧನರಾದ ಬೆನ್ನಲ್ಲೇ, ಸಂಭ್ರಮಾಚರಣೆ ಸ್ಥಗಿತಗೊಂಡಿದೆ.