Latest Kannada Nation & World
ಚೀಟಿ ವ್ಯವಹಾರದಲ್ಲಿ ಪೊಲೀಸರಿಂದ ಹರೀಶ್ ಬಂಧನ; ಜಯಂತ್‌ನನ್ನು ಬಿಟ್ಟು ಹೊರಟ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ

ಜವರೇಗೌಡ್ರ ಬಳಿ ಓಡಿದ ಸಿಂಚನಾ
ಹರೀಶನನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಲೇ, ಸಿಂಚನಾ ತವರು ಮನೆಗೆ ಓಡಿ ಬರುತ್ತಾಳೆ. ಅಪ್ಪನ ಬಳಿ ವಿಷಯ ಹೇಳುತ್ತಾಳೆ, ಆಗ ಜವರೇಗೌಡ್ರು ಮರಿಗೌಡನನ್ನು ಪೊಲೀಸರ ಬಳಿ ಕಳುಹಿಸಿ, ಹರೀಶನನ್ನು ಬಿಡಿಸಿಕೊಂಡು ಬರುತ್ತಾರೆ. ಹರೀಶನನ್ನು ಕಂಡ ಕೂಡಲೇ ಸಿಂಚನಾ ಅಜ್ಜಿ ಒಂದೇ ಸಮನೆ ಬಯ್ಯಲು ಆರಂಭಿಸುತ್ತಾರೆ. ಜವರೇಗೌಡ್ರು ಕೂಡ, ನೀನು ನನ್ನ ಕುಟುಂಬದ ಮರ್ಯಾದೆ ತೆಗೆಯಲು ಯತ್ನಿಸುತ್ತಿದ್ದೀ, ನನ್ನ ಮಗಳ ಗಂಡ ಎನ್ನುವ ಒಂದೇ ಕಾರಣಕ್ಕೆ ಸುಮ್ಮನೆ ಬಿಡುತ್ತಿದ್ದೇನೆ, ಒಂದು ಉದ್ಯಮ ನಡೆಸಲು ಲೈಸನ್ಸ್ ಬೇಕು ಎನ್ನುವ ಕನಿಷ್ಠ ಜ್ಞಾನವೂ ನಿನಗಿಲ್ಲವೇ? ಯಾವ ಸೀಮೆಯ ಗಂಡಸು ನೀನು ಎಂದೆಲ್ಲ ಹೀನಾಯವಾಗಿ ಬಯ್ಯುತ್ತಾರೆ. ಆಗ ಸಿಂಚನಾ ಮಧ್ಯಪ್ರವೇಶಿಸಿ, ದಯವಿಟ್ಟು ಬೈಬೇಡಿ, ಎಲ್ಲವನ್ನೂ ನಾನು ಸರಿಪಡಿಸುತ್ತೇನೆ ಎಂದು ಹೇಳುತ್ತಾಳೆ. ಅಲ್ಲಿಗೆ ಮಂಗಳವಾರದ ಸಂಚಿಕೆ ಕೊನೆಗೊಂಡಿದೆ. ಇತ್ತ ತವರು ಮನೆಗೆ ಹೊರಟ ಜಾಹ್ನವಿಯನ್ನು ಜಯಂತ್ ತಡೆಯುತ್ತಾನಾ? ಕಾದುನೋಡಬೇಕಿದೆ..