Latest Kannada Nation & World
ಮತ್ತೆ ಒಂದಾಗ್ತಾರಾ ಎಆರ್ ರೆಹಮಾನ್, ಸೈರಾ ಬಾನು? ವೈರಲ್ ಆಯ್ತು ವಕೀಲೆ ವಂದನಾ ಶಾ ಮಾತು

ಕೆಲ ದಿನಗಳ ಹಿಂದೆ ಎಆರ್ ರೆಹಮಾನ್ ತಾವು ವಿಚ್ಛೇದನ ಪಡೆಯುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿ ಶಾಕ್ ನೀಡಿದ್ದರು. ಅವರು 29 ವರ್ಷಗಳಿಂದ ಒಟ್ಟಿಗೆ ಬಾಳ್ವೆ ಮಾಡುತ್ತಿದ್ದು, ಒಂದೇ ಬಾರಿ ಜನರಿಗೆ ಈ ವಿಷಯ ತಿಳಿಸಿ ಶಾಕ್ ನೀಡಿದ್ದರು. ಈಗ ಅವರ ಅಗಲಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಇಬ್ಬರಿಗೂ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ. ಇವರಲ್ಲಿ ಖತೀಜಾ ಮದುವೆಯಾಗಿದ್ದಾರೆ. ಈಗ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಬಯಸುತ್ತಿದ್ದಾರೆ ಎಂದು ವಕೀಲೆ ವಂದನಾ ಹೇಳಿದ್ದಾರೆ.