Latest Kannada Nation & World
ಟಾಕ್ಸಿಕ್ ಚಿತ್ರತಂಡದಿಂದ ಅರಣ್ಯ ನಾಶ ವಿವಾದ; ಮತ್ತೆ ಮುನ್ನೆಲೆಗೆ ಬಂತು ಕರ್ನಾಟಕಕ್ಕೊಂದು ಫಿಲಂ ಸಿಟಿ ಬೇಕೆಂಬ ಬೇಡಿಕೆ

ಇವರು ಏನೂ ಮಾಡಲ್ಲ, ಇದೊಂದು ನಾಟಕ
ಈಶ್ವರ್ ಖಂಡ್ರೆ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕೆಲವರು, ‘ಇದು ಜನರನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಅಷ್ಟೇ’ ಎಂದು ಹೇಳಿದ್ದಾರೆ. ರಾಜೇಂದ್ರ ಪೈ ಎನ್ನುವವರು, ‘ಇಲಾಖೆ ಕೈಗೊಂಡಿರುವ ಕ್ರಮ ಏನೆಂದು ಪ್ರಕಟಿಸಬಹುದೇ’ ಎಂದು ಸವಾಲು ಹಾಕಿದ್ದಾರೆ. ‘ದಯಮಾಡಿ ಕಠಿಣ ಕ್ರಮ ತೆಗೆದುಕೊಳ್ಳಿರಿ.. ಬೆಂಗಳೂರಿನಲ್ಲಿ ಮೊದಲೇ ವಿಷಪೂರಿತ ಗಾಳಿ ಸೇವನೆಯಿಂದ ಜನರು ಅರ್ಧ ಸತ್ತಿದ್ದಾರೆ. ಈಗ ಇಂತಹ #Toxic ಸಿನಿಮಾಗಾಗಿ ಮರಗಳನ್ನ ನಾಶ ಮಾಡಿ ಮತ್ತಷ್ಟು Toxic ಗಾಳಿಯನ್ನ ಕೊಡುಗೆಯಾಗಿ ಕೊಡಲು ಮುಂದಾಗಿರುವವರಿಗೆ ಪರಿಸರ ಪಾಠ ಕಲಿಸಿ’ ಎಂದು ನಾಗೇಶ್ ಕುಮಾರ್ ಸಿ ಎನ್ನುವವರು ಆಗ್ರಹಿಸಿದ್ದಾರೆ.