Latest Kannada Nation & World
ನಿತೀಶ್ ರೆಡ್ಡಿ ಶತಕದಾಟ, ಸುಂದರ್ ಜೊತೆ 128 ರನ್ಗಳ ಜೊತೆಯಾಟ; 4ನೇ ಟೆಸ್ಟ್ನಲ್ಲಿ ಭಾರತ ದಿಟ್ಟ ಹೋರಾಟ, ಆದರೂ ಸಂಕಷ್ಟ

171 ಎಸೆತಗಳಲ್ಲಿ ರೆಡ್ಡಿ ಭರ್ಜರಿ ಶತಕ
ತಾನು ಎದುರಿಸಿದ 171ನೇ ಎಸೆತದಲ್ಲಿ ಭರ್ಜರಿ ಟೆಸ್ಟ್ ಶತಕ ಪೂರ್ಣಗೊಳಿಸಿದ ನಿತೀಶ್ ರೆಡ್ಡಿ ಇನ್ನಿಂಗ್ಸ್ಗಲ್ಲಿ 10 ಬೌಂಡರಿ, 1 ಸಿಕ್ಸರ್ ಇತ್ತು. ಇದರೊಂದಿಗೆ ಭಾರತ ತಂಡದ ಮೊತ್ತ 350ರ ಗಡಿ ದಾಟಿಸಿದರು. ಆದರೆ ಇದರ ಬೆನ್ನಲ್ಲೇ ಮಳೆ ಬಂದ ಹಿನ್ನೆಲೆಯಲ್ಲಿ ಪಂದ್ಯ ಸ್ಥಗಿತವಾಯಿತು. ಮಳೆ ನಿಲ್ಲದ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. 3ನೇ ದಿನದ ಪಂದ್ಯದಲ್ಲಿ ಒಟ್ಟು ಎರಡು ಬಾರಿ ಮಳೆ ಅಡ್ಡಿಪಡಿಸಿತು. ನಿತೀಶ್ ರೆಡ್ಡಿ ಜೊತೆಗೆ 2 ರನ್ ಗಳಿಸಿರುವ ಸಿರಾಜ್ ಕ್ರೀಸ್ನಲ್ಲಿದ್ದು, 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ಆಸೀಸ್ ಪರ ಪ್ಯಾಟ್ ಕಮಿನ್ಸ್, ಸ್ಕಾಟ್ ಬೋಲ್ಯಾಂಡ್ ತಲಾ 3 ವಿಕೆಟ್, ನಾಥನ್ ಲಿಯಾನ್ 2 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವುದು ಅನಿವಾರ್ಯವಾಗಿದೆ. ಆದರೆ ಪರಿಸ್ಥಿತಿ ನೋಡಿದರೆ ಡ್ರಾನಲ್ಲಿ ಅಂತ್ಯ ಕಾಣುವಂತಿದೆ. ಉಳಿದ ಎರಡು ದಿನಗಳಲ್ಲಿ ಪಂದ್ಯದ ಚಿತ್ರಣ ಏನಾಗಬಹುದು ಎಂಬುದನ್ನು ಕಾದುನೋಡೋಣ.