Latest Kannada Nation & World
ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಸಿನಿಮಾ ಟ್ರೇಲರ್ ರಿಲೀಸ್-ಕಿಯಾರಾ ಅಡ್ವಾಣಿ ಜೊತೆ ಮಿಂಚಿದ ಗ್ಲೋಬಲ್ ಸ್ಟಾರ್

ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಗೇಮ್ ಚೇಂಜರ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿರ್ದೇಶಕ ಎಸ್.ಎಸ್.ರಾಜಮೌಳಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದ ಬಗ್ಗೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2 ನಿಮಿಷ 4 ಸೆಕೆಂಡುಗಳ ಈ ಟ್ರೈಲರ್ ನಲ್ಲಿ ರಾಮ್ ಚರಣ್ ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೇಮ್ ಚೇಂಜರ್ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಾಮ್ ಚರಣ್, ಶಂಕರ್, ಎಸ್.ಎಸ್.ರಾಜಮೌಳಿ, ಶ್ರೀಕಾಂತ್, ಅಂಜಲಿ, ಎಸ್.ಜೆ.ಸೂರ್ಯ, ಸಮುದ್ರಕಣಿ, ಸಂಗೀತ ನಿರ್ದೇಶಕ ತಮನ್ ಮತ್ತು ನಿರ್ಮಾಪಕ ದಿಲ್ ರಾಜು ಭಾಗವಹಿಸಿದ್ದರು.