Latest Kannada Nation & World
ಕೋದಂಡನ ಮುಂದೆ ಸಿಂಪತಿ ಗಿಟ್ಟಿಸಿಕೊಳ್ಳಲು ರುಕ್ಕು ಪ್ರಯತ್ನ; ಜಾನಕಿಗೆ ಸಮಾಧಾನ ಮಾಡಿದ ಚಾರು
ಕೋದಂಡನ ಮುಂದೆ ರುಕ್ಕು ಸಿಂಪತಿ ನಾಟಕ
ಕೋದಂಡ ಮನೆಯೊಳಗಡೆ ಬರುತ್ತಿದ್ದಾನಾ? ಇಲ್ಲವಾ? ಎಂದು ನೋಡಿಕೊಂಡು ಅವಳು ಒಂದು ಉಪಾಯ ಮಾಡುತ್ತಾಳೆ. ದೇವರ ಮುಂದೆ ನಿಂತುಕೊಂಡು ಕೈ ಮೇಲೆ ಕರ್ಪೂರ ಹೊತ್ತಿಸಿಕೊಂಡು ನಾನೇ ತಪ್ಪು ಮಾಡಿದ್ದು, ನನ್ನಿಂದಲೇ ಇಷ್ಟೆಲ್ಲ ಆಯ್ತು ಎಂದು ಹೇಳುತ್ತಾಳೆ. ಅದನ್ನು ನೋಡಿ ಕೋದಂಡ ಓಡಿ ಬರುತ್ತಾನೆ. “ಯಾಕಮ್ಮ ಈ ರೀತಿ ಮಾಡ್ತಾ ಇದ್ದೀಯ ಎಂದು ಪ್ರಶ್ನೆ ಮಾಡುತ್ತಾನೆ. ಅವನು ಪ್ರಶ್ನೆ ಮಾಡಲಿ ಎಂದೇ ಅವಳು ಆ ರೀತಿ ಮಾಡಿರುತ್ತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.