Latest Kannada Nation & World
ಗೋಧಿ, ಕಡಲೆ, ಸೂರ್ಯಕಾಂತಿ ಸೇರಿ 6 ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಅನುಮೋದಿಸಿದ ಕೇಂದ್ರ ಸಚಿವ ಸಂಪುಟ

ಆರು ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)
ಕೇಂದ್ರ ಸಚಿವ ಸಂಪುಟ 2025-26ನೇ ಸಾಲಿಗೆ ಅನ್ವಯವಾಗುವಂತೆ ಹಿಂಗಾರು ಬೆಳೆಗಳಿಗೆ ಹೊಸ ಬೆಂಬಲ ಬೆಲೆಯನ್ನು ಪ್ರಕಟಿಸಿರುವಂಥದ್ದು. ಈ ಪ್ರಸ್ತಾವನೆಯಂತೆ, ಸಾಸಿವೆಗೆ ಪ್ರತಿ ಕ್ವಿಂಟಾಲ್‌ಗೆ 300 ರೂಪಾಯಿ, ಮಸೂರ್ ಬೇಳೆಗೆ ಪ್ರತಿ ಕ್ವಿಂಟಲ್‌ಗೆ 275 ರೂಪಾಯಿ, ಉದ್ದಿನಬೇಳೆಗೆ ಕ್ವಿಂಟಲ್ ಗೆ 210 ರೂಪಾಯಿ, ಗೋಧಿಗೆ 150 ರೂಪಾಯಿ, ಕುಸುಬೆಗೆ 140 ರೂಪಾಯಿ, ಬಾರ್ಲಿ ಕ್ವಿಂಟಾಲ್‌ಗೆ 130 ರೂಪಾಯಿ ಏರಿಕೆಯಾಗಿದೆ. ರೈತರ ಬೆಳೆಗಳಿಗೆ ಖರ್ಚಿಗಿಂತ ಒಂದೂವರೆ ಪಟ್ಟು ಹೆಚ್ಚು ಎಂಎಸ್‌ಪಿ ನೀಡಬೇಕು ಎನ್ನುವ ನೀತಿಯಂತೆ ದರ ನಿಗದಿಯಾಗಿದೆ.