Latest Kannada Nation & World
ಚಿತ್ರರಂಗಕ್ಕೆ ಬರುವವರು ರಿಜೆಕ್ಷನ್ ಸ್ವೀಕರಿಸಲು ರೆಡಿ ಇರಲೇಬೇಕು; ಅಮೃತಧಾರೆ ಧಾರಾವಾಹಿ ನಟ ಕರಣ್ ಕೆ ಆರ್ ಸಂದರ್ಶನ
ಪ್ರ: ನೀವು ʼಅರಸಿʼ ಧಾರಾವಾಹಿಯಿಂದ ಇವತ್ತಿನವರೆಗೆ ನೋಡಲು ಸುಂದರವಾಗಿ, ಫಿಟ್‌ನೆಸ್ ಕಾಯ್ದುಕೊಂಡಿದ್ದೀರಿ ಹೇಗೆ?
ಉ: ಅರಸಿ ಮುಗಿದಮೇಲೆ ನಾನು ಫಿಟ್‌ನೆಸ್ ಕಾಪಾಡಿಕೊಂಡಿರಲಿಲ್ಲ, ಸೌಂದರ್ಯವರ್ಧಕಗಳನ್ನು ಬಳಸುತ್ತಿರಲಿಲ್ಲ. ಅನುವಂಶೀಕತೆಯಿಂದ ನಾನು ಹೀಗೆ ಇರಬಹುದು. ಆದರೆ ನನ್ನನ್ನು ನಾನು ನೋಡಲು ಸುಂದರ ಅಂತ ಮಾತ್ರ ಪರಿಗಣಿಸಿಲ್ಲ. ನನ್ನ ತಂದೆ ನನಗೆ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ವಹಿಸಿದ್ದರು, ಕಾಫಿ ಸೀಸನ್ ಮುಗಿದ್ಮೇಲೆ ನಾನು ಜಿಮ್‌ಗೆ ಹೋದೆ, ನಾಲ್ಕು ತಿಂಗಳಲ್ಲಿ ರೆಡಿಯಾದೆ. ಆಮೇಲೆ ಫೋಟೋಶೂಟ್ ಮಾಡಿಸಿಕೊಂಡು ಆಡಿಷನ್ ಕೊಡಲು ಶುರು ಮಾಡಿದೆ. ಆಗ ನನಗೆ ʼಅಮೃತಧಾರೆʼ ಧಾರಾವಾಹಿ ಅವಕಾಶ ಬಂತು. ಆರಂಭದಲ್ಲಿ ಲೀಡ್ ಅಲ್ಲ ಅಂತ ನಾನು ರಿಜೆಕ್ಟ್ ಮಾಡಿದ್ದೆ, ಆಮೇಲೆ ಪಾತ್ರದ ಬಗ್ಗೆ ಕೇಳಿ ತುಂಬ ಇಷ್ಟ ಆಗಿ ಒಪ್ಪಿಕೊಂಡೆ.