ಕಟ್ಟೆಯೊಡೆದ ಭೂಮಿ ಸಹನೆ, ಅಪ್ಪನ ಹಂಗಿಸಿದ ಅಪೇಕ್ಷಾಳ ಕೆನ್ನೆಗೆ ಬಿತ್ತು ಭೂಮಿಕಾಳ ಕೈ ಏಟು; ಇನ್ನೂ ನಾಲ್ಕು ಕೊಡಿ ಅಕ್ಕ ಅಂದ್ರು ಪ್ರೇಕ್ಷಕರು-

Amruthadhaare serial tomorrow episode: ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೆ ಅಕ್ಕ ಮತ್ತು ತಂಗಿ ವೈಮನಸ್ಸು ಹೈಲೈಟ್ ಆಗಿದೆ. ಒಂದೆಡೆ ಗೌತಮ್ ತಾಯಿ ತಂಗಿಯ ಭೇಟಿಗೆ ಎಲ್ಲರೂ ಕಾಯುತ್ತಿರುವಾಗ ನಿರ್ದೇಶಕರು ದೀಪಾವಳಿ ಹಬ್ಬ ಮುಗಿದು ಒಂದು ವಾರ ಕಳೆದ ಬಳಿಕ ಅಕ್ಕ ಮತ್ತು ತಂಗಿಯ ನಡುವಿನ ವೈಮನಸ್ಸನ್ನು ಅಮೃತಧಾರೆ ನಿರ್ದೇಶಕರು ಹೈಲೈಟ್ ಮಾಡಿದ್ದಾರೆ. ಈ ಮೂಲಕ ಕೆಲವು ವಾರ ಸೀರಿಯಲ್ ಅನ್ನು ಬೇರೆ ಕಡೆಗೆ ತಿರುಗಿಸುವ ಪ್ರಯತ್ನ ಮಾಡಿದಂತೆ ಇದೆ. ಶಕುಂತಲಾದೇವಿ ನೀಡಿರುವ ಕಾರ್ಡ್ ಪಡೆದು ಅಪೇಕ್ಷಾ ಶಾಪಿಂಗ್ ಮುಗಿಸಿ ಬಂದಿದ್ದಾಳೆ. ಎಲ್ಲರಿಗೂ ಶಾಪಿಂಗ್ ಮಾಡಿ ಡ್ರೆಸ್ ತಂದಿದ್ದಾಳೆ. “ಇದು ಅತ್ತೆ ನಿಮಗೆ” “ಮಲ್ಲಿಯವರೇ ಇದು ನಿಮಗೆ” “ಈದು ಜೈದೇವ್‌ಗೆ” “ಮಾವ ಇದು ನಿಮಗೆ” ಎಂದು ಎಲ್ಲರಿಗೂ ಡ್ರೆಸ್ ಕೊಡುತ್ತಾಳೆ. “ಭಾವನಿಗೆ, ಪಾರ್ಥನಿಗೆ, ಅಜ್ಜಿಗೆ ಎಲ್ಲರಿಗೂ ತಂದಿದ್ದೇನೆ” ಎಂದು ಹೇಳುತ್ತಾಳೆ. “ಎಲ್ಲರಿಗೆ ತಂದಿದ್ಯ, ನಿನ್ನ ಅಕ್ಕನಿಗೆ ತಂದಿಲ್ವ?” ಎಂದು ರಮಾಕಾಂತ್ ಕೇಳಿದಾಗ “ಮರೆತು ಹೋಗಿಲ್ಲ, ನನಗೆ ಅವಳ ತರಹ ಔಟ್‌ಡೇಟೆಡ್ ಕಾಸ್ಟ್ಯೂಮ್ ಪರ್ಚೇಸ್ ಮಾಡಲು ಗೊತ್ತಿಲ್ಲ” ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾಳೆ. ಮರೆಯಲ್ಲಿದ್ದ ಭೂಮಿಕಾ ಇದನ್ನು ಕೇಳಿ ಬೇಸರಪಟ್ಟುಕೊಳ್ಳುತ್ತಾಳೆ. “ಅವಳು ಹಳೆ ಕಾಲದ ಹೆಂಗಸಿನಂತೆ ಡ್ರೆಸ್ ಮಾಡಿಕೊಳ್ಳುತ್ತಾಳೆ. ನನಗೆ ಅದನ್ನೆಲ್ಲ ಸೆಲೆಕ್ಟ್ ಮಾಡಲು ಬರೋದಿಲ್ಲ ಅಂಕಲ್. ಸ್ಟೈಲ್ ಅಂದ್ರೆ ಏನು ಅಂತ ಅವಳಿಗೆ ಗೊತ್ತಿಲ್ಲ, ಅವಳಿಗೆ ಏನು ಬೇಕೋ ಅದನ್ನು ಅವಳೇ ತೆಗೆದುಕೊಳ್ಳಲಿ” ಎಂದು ಅಪೇಕ್ಷಾ ಹೇಳುತ್ತಾಳೆ. ಮೊದಲು ಹೇಗಿದ್ದಳು, ಈಗ ಹೇಗೆ ಆಗಿದ್ದಾಳೆ ಎಂದು ಭೂಮಿಕಾಗೆ ನೆನಪಾಗುತ್ತದೆ. ಆದರೆ, ಸುಮ್ಮನಾಗುತ್ತಾಳೆ. ಆದರೆ, ಭೂಮಿಕಾಳ ಸಹನೆ ಕಟ್ಟೆಯೊಡೆಯುವ ಪ್ರಸಂಗ ನಾಳೆಯ ಸಂಚಿಕೆಯಲ್ಲಿ ನಡೆಯಲಿದೆ.