Latest Kannada Nation & World
ಚೊಚ್ಚಲ ಖೋ ಖೋ ವಿಶ್ವಕಪ್ಗೆ ಭಾರತ ಆತಿಥ್ಯ; ಇಂದಿನಿಂದ ಪಂದ್ಯ ಆರಂಭ, ಭಾಗವಹಿಸುವ ದೇಶಗಳು ಹಾಗೂ ಸಂಪೂರ್ಣ ವೇಳಾಪಟ್ಟಿ

ಇದೇ ಮೊದಲ ಬಾರಿಗೆ ಖೋ ಖೋ ವಿಶ್ವಕಪ್ ನಡೆಯುತ್ತಿದ್ದು, ಭಾರತವು ಚೊಚ್ಚಲ ಆವೃತ್ತಿಯ ಟೂರ್ನಿ ಆಯೋಜನೆಗೆ ಸಜ್ಜಾಗಿದೆ. 2025ರ ಖೋ ಖೋ ವಿಶ್ವಕಪ್ ಜನವರಿ 13ರಿಂದ 19ರವರೆಗೆ ಆಯೋಜಿಸಲಾಗಿದ್ದು, ಭಾರತದ ರಾಜಧಾನಿ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಪುರುಷರ ವಿಭಾಗದಲ್ಲಿ 20 ತಂಡಗಳು ಮತ್ತು ಮಹಿಳೆಯರ ವಿಭಾಗದಲ್ಲಿ 19 ತಂಡಗಳು ಭಾಗವಹಿಸಲಿವೆ. ಜನವರಿ 13ರ ಸೋಮವಾರ ಭಾರತ ಪುರುಷರ ಖೋ ಖೋ ತಂಡವು ನೇಪಾಳವನ್ನು ಎದುರಿಸುವುದರೊಂದಿಗೆ ಪಂದ್ಯಾವಳಿಗೆ ಅಧಿಕೃತ ಚಾಲನೆ ಸಿಗಲಿದೆ.