Latest Kannada Nation & World

ಜೀವಮಾನದಲ್ಲೇ ಹೊಸ ಎತ್ತರಕ್ಕೆ ನೆಗೆದ ನಿಫ್ಟಿ 50, ಸೆನ್ಸೆಕ್ಸ್‌; ಈ ಹಸಿರಿನ ಜಿಗಿತಕ್ಕೆ ಇದೆ 5 ಕಾರಣ-business news stock market today nifty 50 sensex hit life time highs experts list out these 5 reasons pcp ,ರಾಷ್ಟ್ರ-ಜಗತ್ತು ಸುದ್ದಿ

Share This Post ????

Stock market today: ಭಾರತದ ಷೇರುಪೇಟೆಯು ಇಂದಿನ ವಹಿವಾಟಿನ ಕೊನೆಯ ಗಂಟೆಯಲ್ಲಿ ಐತಿಹಾಸಿಕ ಹೊಸ ಎತ್ತರಕ್ಕೆ ನೆಗೆಯಿತು. ಎಸ್‌ಆಂಡ್‌ಪಿ ಬಿಎಸ್‌ಇ ಸೆನ್ಸೆಕ್ಸ್‌ ಇದೇ ಮೊದಲ ಬಾರಿಗೆ 83 ಸಾವಿರದ ಗಡಿ ದಾಟಿತ್ತು. . ಅಂತಿಮವಾಗಿ 82,791 ಅಂಕಗಳಿಗೆ ತಲುಪಿತ್ತು. ನಿಫ್ಟಿಯು ಕೂಡ 25,433 ಅಂಕಕ್ಕೆ ತಲುಪಿ ಹೊಸ ದಾಖಲೆ ಬರೆಯಿತು. ಬ್ಯಾಂಕಿಂಗ್‌ ಮತ್ತು ಐಟಿ ವಲಯಗಳ ಬೆಂಬಲದಿಂದ ಈ ರಾಲಿ ನಡೆಯಿತು. ಇದರೊಂದಿಗೆ ವಾಹನ ವಲಯವೂ ಸಾಥ್‌ ನೀಡಿದೆ. ರಿಲಯೆನ್ಸ್‌ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಇನ್ಫೋಸಿಸ್‌, ಐಸಿಐಸಿಐ ಬ್ಯಾಂಕ್‌ನಂತಹ ಹೆವಿ ತೂಕದ ಷೇರುಗಳು ಒಟ್ಟಾಗಿ ನಿಫ್ಟಿ ಫಿಫ್ಟಿಗೆ 171 ಅಂಕಗಳನ್ನು ಸೇರಿಸಿದವು. 50 ಇಂಡೆಕ್ಸ್‌ಗಳಲ್ಲಿ 49 ಇಂಡೆಕ್ಸ್‌ಗಳು ಹಸಿರಾಗಿ ವಹಿವಾಟು ಮುಗಿಸಿದವು. ಇವುಗಳಲ್ಲಿ ಹೀಮಡಾಲ್ಕೊ ಕಂಪನಿಯು ಶೇಕಡ 4.5ರಷ್ಟು ಏರಿಕೆ ಕಂಡು ಮೊದಲ ಸ್ಥಾನದಲ್ಲಿತ್ತು. ಭಾರತಿ ಏರ್‌ಟೆಲ್‌, ಎನ್‌ಟಿಪಿಸಿ, ಶ್ರೀರಾಮ್‌ ಫೈನಾನ್ಸ್‌, ಮಹೀಂದ್ರ ಆಂಡ್‌ ಮಹೀಂದ್ರ, ಜೆಎಸ್‌ಡಬ್ಲ್ಯು ಸ್ಟೀಲ್‌, ಈಚರ್‌ ಮೋಟಾರ್ಸ್‌, ಒಎನ್‌ಜಿಸಿ, ಅದಾನಿ ಪೋರ್ಟ್ಸ್‌, ಆಂಡ್‌ ಎಸ್‌ಇಝಡ್‌, ವಿಪ್ರೋ, ಗ್ರಾಸಿಮ್‌ ಇಂಡಸ್ಟ್ರೀಸ್‌ಗಳೂ ಉತ್ತಮ ಏರಿಕೆ ದಾಖಲಿಸಿದವು.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!