Latest Kannada Nation & World
ಜೈಲಿಗೆ ಹೋಗಿ ಬಂದ ಅಲ್ಲು ಅರ್ಜುನ್ ಭೇಟಿ ಮಾಡಿದ ನೀವು, ಸಂತ್ರಸ್ತೆ ಮನೆಗೆ ಹೋಗಿದ್ರಾ? ತೆಲುಗು ನಟರಿಗೆ ಸಿಎಂ ರೇವಂತ್ ರೆಡ್ಡಿ ಟಾಂಗ್
ನಟ ಅಲ್ಲು ಅರ್ಜುನ್ ಹೀಗೆ ಜೈಲಿಂದ ಹೊರಬರುತ್ತಿದ್ದಂತೆ, ಟಾಲಿವುಡ್‌ನ ಬಹುತೇಕ ಎಲ್ಲ ಸ್ಟಾರ್ ನಟರು ಅಲ್ಲು ಅರ್ಜುನ್ ನಿವಾಸಕ್ಕೆ ತೆರಳಿ ಭೇಟಿ ಮಾಡಿಬಂದಿದ್ದರು. ನಟ ಜಾನಿ ಒಂದು ಹೆಜ್ಜೆ ಮುಂದೆ ಹೋಗಿ, ಸರ್ಕಾರ, ಪೊಲೀಸ್ ಮತ್ತು ಮಾಧ್ಯಮ ವ್ಯವಸ್ಥೆಗಳನ್ನು ಟೀಕಿಸಿ ಪೋಸ್ಟ್ ಮಾಡಿದ್ದರು. ಇನ್ನೂ ಕೆಲವರು ಅದೇ ಹಾದಿಯಲ್ಲಿ ನಡೆದರು. ಆದರೆ, ದುರಂತ ಏನೆಂದರೆ, ಸಂತ್ರಸ್ತೆಯ ಕುಟುಂಬವನ್ನು ಒಬ್ಬೇ ಒಬ್ಬ ಸಿನಿಮಾ ಸೆಲೆಬ್ರಿಟಿಯೂ ಭೇಟಿ ಮಾಡಲಿಲ್ಲ. ಟೀಕೆಗಳು ಹೆಚ್ಚಾಗುತ್ತಿದ್ದಂತೆ, ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಪುಷ್ಪ 2 ಸಿನಿಮಾ ನಿರ್ದೇಶಕ ಸುಕುಮಾರ್ ಭೇಟಿ ಮಾಡಿದರು. ಅವರ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದರು.