Latest Kannada Nation & World
ತಮ್ಮ ತಂಡ ಸೋತಿದ್ದನ್ನೂ ಮರೆತು ವಿರಾಟ್ ಕೊಹ್ಲಿ ಶತಕ ಸಂಭ್ರಮಿಸಿದ ಪಾಕಿಸ್ತಾನ ಅಭಿಮಾನಿಗಳು, ವಿಡಿಯೋ ವೈರಲ್

ಪಾಕಿಸ್ತಾನದಲ್ಲಿ ಬ್ಯಾಟಿಂಗ್ ಮಾಂತ್ರಿಕನ ಮೇಲೆ ಪ್ರೀತಿ
ತಮ್ಮ ದೇಶವೇ ಸೋತರೂ ನಿರಾಸೆಗೊಳಗಾಗದ ಪಾಕಿಸ್ತಾನ ಫ್ಯಾನ್ಸ್, ವಿರಾಟ್ ಶತಕವನ್ನು ಸಂಭ್ರಮಿಸಿದ್ದು, ಅಚ್ಚರಿ ಮೂಡಿಸಿತು. ಪಾಕ್ನಲ್ಲಿ ಕೊಹ್ಲಿಯನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ಈ ದೃಶ್ಯ ಜಗಜ್ಜಾಹೀರು ಮಾಡಿತು. ಬ್ಯಾಟಿಂಗ್ ಮಾಂತ್ರಿಕನ ಮೇಲಿನ ಅವರ ಪ್ರೀತಿಯನ್ನು ಇದು ಎತ್ತಿ ತೋರಿಸುತ್ತದೆ. ಇದು ಗಡಿ ಮೀರಿದ ಪ್ರೀತಿ. ಹೊರಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಪಾಕಿಸ್ತಾನದ ಫ್ಯಾನ್ಸ್, ಕೊಹ್ಲಿ ಬೌಂಡರಿಯೊಂದಿಗೆ ನೂರರ ಗಡಿ ದಾಟುತ್ತಿದ್ದಂತೆ ಎದ್ದು ನಿಂತು ಸಂಭ್ರಮಿಸಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.