Latest Kannada Nation & World
ಚಾರು ಎಂದು ಏಕವಚನದಲ್ಲಿ ಕೂಗಿ ಕರೆದ ಕಿಟ್ಟಿ; ಅತ್ತಿಗೆ ಮೇಲೆ ಏಕಾಏಕಿ ಸಿಟ್ಟಿಗೆದ್ದ ಕೃಷ್ಣ

ರಾಮಾಚಾರಿ ಧಾರಾವಾಹಿಯಲ್ಲಿ ಚಾರುಗೆ ಕಷ್ಟ ಕೊಡಲು ಎಂದೇ ಎರಡು ಜನ ಬಂದಂತಾಗಿದೆ. ಮೊದಲು ವೈಷಾಖಾ ಒಬ್ಬಳೇ ಆಗಿದ್ದಳು ಈಗ ಅವಳ ಜತೆಗೆ ರುಕ್ಕು ಕೂಡ ಸೇರಿಕೊಂಡಿದ್ದಾಳೆ. ಹೀಗಿರುವ ಅವರಿಬ್ಬರ ಆಟ ಇನ್ನೂ ಹೆಚ್ಚಾಗಿದೆ. ವೈಶಾಖಾ ಎಂಥವಳು ಎನ್ನುವ ವಿಚಾರ ಈಗಾಗಲೇ ಚಾರುಗೆ ಗೊತ್ತಿದೆ, ಆದರೆ ರುಕ್ಕು ಯಾವ ರೀತಿ ಎಂದು ಇನ್ನು ಮುಂದೆ ಅರ್ಥ ಆಗಬೇಕಿದೆ. ರುಕ್ಕು ತನ್ನ ಗಂಡ ಕೃಷ್ಣನಿಗೆ ಹೇಳಿ ಹೊಸ ಆಟ ಆರಂಭಿಸಿದ್ದಾಳೆ. ಅವಳಿಗೆ ಚಾರು ಬೈಸಿಕೊಂಡಷ್ಟೂ ಸಂತೋಷ ಆಗುತ್ತದೆ. ಏಕಏಕಿ ಕಿಟ್ಟಿ ಚಾರುವನ್ನು ಕೋಪದಿಂದ ಏಕವಚನದಲ್ಲಿ ಕೂಗಿದ್ದಾನೆ.