Latest Kannada Nation & World
ಅಮೃತಧಾರೆಯಲ್ಲಿ ಸಾರಾ ಅಣ್ಣಯ್ಯ ಜಾಗಕ್ಕೆ ಇಶಿತಾ ವರ್ಷ; ಮಹಿಮಾಳಿಗೆ ಇಷ್ಟವಿಲ್ವಂತೆ ಬದಲಾದ ಜೀವ

ಅಮೃತಧಾರೆ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ನಿರ್ವಹಿಸುತ್ತಿದ್ದ ಪಾತ್ರವನ್ನು ಈಗ ಇಶಿತಾ ವರ್ಷ ನಿರ್ವಹಿಸುತ್ತಿದ್ದಾಳೆ. ಜೀವ ಪಾತ್ರವನ್ನೂ ಹೊಸ ನಟ ನಿಭಾಯಿಸುತ್ತಿದ್ದಾನೆ. ಇಲ್ಲಿಯವರೆಗೆ ಜೀವನ್ ಪಾತ್ರದಲ್ಲಿ ಶಶಿ ಹೆಗ್ಗಡೆ ಎಲ್ಲರಿಗೂ ಇಷ್ಟವಾಗಿದ್ದರು. ಆದರೆ, ಹೊಸ ಪಾತ್ರದಾರಿ ನೆಗೆಟಿವ್ ರೋಲ್‌ಗೆ ಬದಲಾಗಿರುವ ಕಾರಣ ಪ್ರೇಕ್ಷಕರು ಎಷ್ಟು ಇಷ್ಟಪಡುತ್ತಾರೋ ಕಾದು ನೋಡಬೇಕಿದೆ. ಇದೇ ಸಮಯದಲ್ಲಿ ಮಹಿಮಾ ಪಾತ್ರ ಬದಲಾಗಿದೆ. ಆದರೆ, ಆಕೆಯ ಕ್ಯಾರೆಕ್ಟರ್ ಅಂದ್ರೆ ಗುಣ ಬದಲಾಗಿಲ್ಲ. ಪಾರ್ಥ ಮತ್ತು ಅಪೇಕ್ಷಾ ಜೋಡಿ ಆರಂಭದಲ್ಲಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದ್ದರು. ಆದರೆ, ಯಾವಾಗ ಅಪೇಕ್ಷಾನ ಪಾತ್ರವನ್ನು ನೆಗೆಟಿವ್ ಮಾಡಿದ್ರೋ ಆಗ ಅಪ್ಪಿ ಬಗ್ಗೆ ಪ್ರೇಕ್ಷಕರು ಬಯ್ಯಲು ಆರಂಭಿಸಿದ್ದಾರೆ. ಆದರೆ, ಇಲ್ಲಿ ಜೀವನ್ ಗುಣ ಬದಲಾಗಿದೆ. ಗುಣ ಬದಲಾಗದೆ ಇರುವ ಕಾರಣದಿಂದ ಇಶಿತಾ ವರ್ಷ ಸೇಫ್ ಎನ್ನಬಹುದು.