Latest Kannada Nation & World
ದೆಹಲಿ ಅಬಕಾರಿ ನೀತಿ ಕೇಸ್; ಅರವಿಂದ ಕೇಜ್ರಿವಾಲ್ ವಿಚಾರಣೆಗೆ ಇಡಿಗೆ ಅನುಮತಿ ನೀಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್
ಜಾರಿ ನಿರ್ದೇಶನಾಲಯದ (ಇಡಿ) ಪ್ರಕಾರ, ಎಎಪಿ ನಾಯಕರಿಗೆ ಅನುಕೂಲವಾಗುವಂತೆ ಮತ್ತು ಕಾರ್ಟೆಲ್ ರಚನೆಗಳನ್ನು ಉತ್ತೇಜಿಸಲು ಅಬಕಾರಿ ನೀತಿಯನ್ನು ಉದ್ದೇಶಪೂರ್ವಕವಾಗಿ ಲೋಪದೋಷಗಳೊಂದಿಗೆ ವಿನ್ಯಾಸಗೊಳಿಸಲಾಗಿತ್ತು. ಅದರಲ್ಲಿ ರಿಯಾಯಿತಿಗಳು, ಪರವಾನಗಿ ಶುಲ್ಕ ವಿನಾಯಿತಿಗಳನ್ನು ಮದ್ಯ ಉದ್ಯಮಿಗಳಿಗೆ ನೀಡಿದ್ದಾರೆ. ಇದಲ್ಲದೆ, ಕೋವಿಡ್ -19 ಅಡೆತಡೆಗಳ ಸಮಯದಲ್ಲಿ ಪರಿಹಾರ ಸೇರಿ ಆದ್ಯತೆಯ ಚಿಕಿತ್ಸೆ ಉಲ್ಲೇಖಿಸಲಾಗಿತ್ತು. ಇದಕ್ಕೆ ಬದಲಾಗಿ ಎಎಪಿ ನಾಯಕರು ಮದ್ಯದ ವ್ಯವಹಾರಗಳಿಂದ ಕಿಕ್‌ಬ್ಯಾಕ್ ಸ್ವೀಕರಿಸಿದ್ದರು ಎಂದು ಇಡಿ ಆರೋಪಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.