Astrology
ವಿಷ್ಣು ನರಕಾಸುರನಿಂದ ವೇದಗಳನ್ನು ಮರಳಿ ಪಡೆದ ಜಾಗ, ಅಸ್ಸಾಂನ ಹಯಗ್ರೀವ ದೇವಸ್ಥಾನದ ವೈಶಿಷ್ಟ್ಯ ತಿಳಿಯಿರಿ

ಮತ್ತೊಂದು ಪೌರಾಣಿಕ ಕತೆಯ ಪ್ರಕಾರ ನರಕಾಸುರನು ಬ್ರಹ್ಮದೇವನಿಂದ ವೇದಗಳನ್ನು ಕಳ್ಳತನ ಮಾಡುತ್ತಾನೆ. ಯಾರೊಬ್ಬರ ಕೈಗೂ ಸಿಲುಕದೆ ಓಡಿಹೋಗುತ್ತಾನೆ. ಆಗ ವಿಧಿ ಇಲ್ಲದೆ ಬ್ರಹ್ಮನು ಶಿವನ ಸಹಾಯವನ್ನು ಬೇಡುತ್ತಾನೆ. ಎಲ್ಲಾ ದೇವತೆಗಳ ಸಹಾಯದ ನಡುವೆಯೂ ವೇದಗಳನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಆಗ ದೇವತೆಗಳೆಲ್ಲರೂ ವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ವಿಷ್ಣುವು ಹಯಗ್ರೀವರ ಅವತಾರದಲ್ಲಿ ಯುದ್ಧ ಮಾಡಿ ನರಕಾಸುರನಿಂದ ವೇದಗಳನ್ನು ಪಡೆದು ಮರಳಿ ಬ್ರಹ್ಮನಿಗೆ ನೀಡುತ್ತಾರೆ. ಸಕಲ ವಿಚಾರಗಳು ವೇದದಲ್ಲಿ ಅಡಗಿದೆ ಎಂಬುದು ತಿಳಿದ ವಿಚಾರ. ಆದ್ದರಿಂದ ಈ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿದಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನ ಲಭಿಸುತ್ತದೆ. ಅಲ್ಲದೆ ಪ್ರತಿಯೊಬ್ಬರ ಯೋಚನಾಲಹರಿಯು ಸರಿಯಾದ ಹಾದಿಯಲ್ಲಿ ನಡೆಯುತ್ತದೆ.