ಮಹಾಯುತಿ ಪರ ಜನರ ಒಲವು ಅಂತಿದೆ ಫಲೋಡಿ ಸಟ್ಟಾ ಬಜಾರ್, ಎಕ್ಸಿಟ್ ಪೋಲ್ ಕಡೆಗೆ ಎಲ್ಲರ ಚಿತ್ತ

ಮುಂಬಯಿ: ಮಹಾರಾಷ್ಟ್ರ ಚುನಾವಣೆ ಒಂದೇ ಹಂತದ ಮತದಾನ ಇಂದು (ನವೆಂಬರ್ 20) ಸಂಪನ್ನವಾಗಿದೆ. ಈ ನಡುವೆ, ಎಲ್ಲರ ಚಿತ್ತ ಎಕ್ಸಿಟ್ ಪೋಲ್ (ಮತದಾನೋತ್ತರ ಸಮೀಕ್ಷೆ) ಕಡೆಗೆ ಹರಿದಿರುವಾಗಲೇ ಫಲೋಡಿ ಸಟ್ಟಾ ಬಜಾರ್ (ಫಲೋಡಿ ಬೆಟ್ಟಿಂಗ್ ಮಾರುಕಟ್ಟೆ) ನ ಭವಿಷ್ಯ ಪ್ರಕಟವಾಗಿದೆ. ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸುತ್ತ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ. ಮಹಾರಾಷ್ಟ್ರದಲ್ಲಿ, ಬಿಜೆಪಿ ನೇತೃತ್ವದ ಮಹಾಯುತಿಯಲ್ಲಿ ಅಜಿತ್ ಪವಾರ್ ಅವರ ಎನ್‌ಸಿಪಿ ಮತ್ತು ಏಕನಾಥ್ ಶಿಂಧೆ ಅವರ ಶಿವ ಸೇನಾ ಮಿತ್ರಪಕ್ಷಗಳಾಗಿದ್ದು, ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ಹೆಚ್ಚು ಮುಖಾ ಮುಖಿ ಸ್ಪರ್ಧೆ ಕಾಣುತ್ತಿದೆ. ಬಿಜೆಪಿ ನೇತೃತ್ವದ ಮಹಾಯುತಿ ಪರ ಒಲವು ಇರುವುದು ಕಂಡುಬಂದಿದ್ದು, ಎಲ್ಲರ ಚಿತ್ತ ಎಕ್ಸಿಟ್ ಪೋಲ್ ಫಲಿತಾಂಶಗಳ ಕಡೆಗೆ ತಿರುಗಿದೆ. ಈ ನಡುವೆ, ಬೆಟ್ಟಿಂಗ್ ಬಜಾರ್‌ಗಳ ಪೈಕಿ ಬಹುಮುಖ್ಯವಾಗಿರುವ ಫಲೋಡಿ ಸಟ್ಟಾ ಬಜಾರ್ ಭವಿಷ್ಯವೂ ಮಹಾಯುತಿ ಪರವೇ ಇದ್ದು ಅದರ ವಿವರ ಹೀಗಿದೆ