Latest Kannada Nation & World
ಪ್ರತಿದಿನ ಪ್ರಸಾರವಾಗ್ತಿದ್ದ ಹೊಸ ಸೀರಿಯಲ್ ಇನ್ಮುಂದೆ ವಾರಕ್ಕೆ ಎರಡೇ ದಿನ ಮಾತ್ರ! ಹೈಪ್ ಸೃಷ್ಟಿಸಿದ್ದ ಧಾರಾವಾಹಿಗೆ ಇದೆಂಥ ಸ್ಥಿತಿ

Nooru Jamnaku Serial Time Change: ಕಿರುತೆರೆಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿರುತ್ತವೆ. ಹೊಸ ಹೊಸ ಸೀರಿಯಲ್‌ಗಳ ಆಗಮನದ ಜತೆಗೆ, ಒಂದಷ್ಟು ಸೀರಿಯಲ್‌ಗಳನ್ನು ಕೊನೆಗಾಣಿಸುವ ಕೆಲಸವೂ ನಡೆಯುತ್ತಿರುತ್ತದೆ. ಕೆಲವೊಮ್ಮೆ ಟಿಆರ್‌ಪಿಯಲ್ಲಿಯೂ ಮೋಡಿ ಮಾಡದ ಸೀರಿಯಲ್‌ಗಳನ್ನು ಡೌನ್‌ಗ್ರೇಡ್ ಮಾಡಿದ ಉದಾಹರಣೆಗಳೂ ಇವೆ. ಇದೀಗ ಕಲರ್ಸ್ ಕನ್ನಡದಲ್ಲಿ ಡಿಸೆಂಬರ್‌ನಲ್ಲಷ್ಟೇ ಪ್ರಸಾರ ಆರಂಭಿಸಿದ್ದ ಧಾರಾವಾಹಿ, ಮುಂದಿನ ವಾರದಿಂದ ಪ್ರತಿದಿನದ ಬದಲು ವಾರಾಂತ್ಯಕ್ಕೆ ಪ್ರಸಾರವಾಗಲಿದೆ. ಆ ಧಾರಾವಾಹಿ ಬೇರಾವುದೂ ಅಲ್ಲ, ನೂರು ಜನ್ಮಕೂ!