Latest Kannada Nation & World
ಎಟಿಎಂನಲ್ಲಿ ಹರಿದ ನೋಟು ಸಿಕ್ಕಾಗ ಅದನ್ನು ಬದಲಾಯಿಸೋದು ಹೇಗಂತೀರಾ, ಆರ್‌ಬಿಐನ ಈ ನಿಯಮ ತಿಳ್ಕೊಂಡಿರಿ

ಎಟಿಎಂನಲ್ಲಿ ಹರಿದ ಮತ್ತು ಗಲೀಜಾಗಿರುವ ನೋಟು ಸಿಕ್ಕರೆ ಏನು ಮಾಡಬೇಕು
ಆರ್‌ಬಿಐ ನಿಯಮ ಪ್ರಕಾರ, ಎಟಿಎಂನಿಂದ ಹೊರ ಬಂದ ನೋಟುಗಳು ಹರಿದಿದ್ದರೆ ಅಥವಾ ವಿರೂಪಗೊಂಡಿದ್ದರೆ ಅಥವಾ ಗಲೀಜಾಗಿದ್ದರೆ, ಅದನ್ನು ಬದಲಾಯಿಸಲು ಬ್ಯಾಂಕ್ ನಿರಾಕರಿಸುವಂತಿಲ್ಲ. ಬ್ಯಾಂಕ್‌ನಲ್ಲಿ ನೋಟುಗಳನ್ನು ಬದಲಾಯಿಸುವುದಕ್ಕೆ ದೀರ್ಘ ಪ್ರಕ್ರಿಯೆಯೇನೂ ಇಲ್ಲ. ಹರಿದ ಅಥವಾ ವಿರೂಪಗೊಂಡ, ಗಲೀಜಾಗಿರುವ ನೋಟುಗಳನ್ನು ನಿಮಿಷಗಳಲ್ಲಿ ಬದಲಾಯಿಸಬಹುದು. ಎಟಿಎಂನಿಂದ ತೆಗೆದ ಹರಿದ ನೋಟನ್ನು ಅದಕ್ಕೆ ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಕೊಂಡೊಯ್ಯಿರಿ. ಅಲ್ಲಿ ನೋಟು ಬದಲಾವಣೆಗೆ ನಿಗದಿತ ಫಾರಂ ಸಿಗುತ್ತದೆ. ಅದನ್ನು ಭರ್ತಿ ಮಾಡಿ. ಅದರಲ್ಲಿ ಹಣ ವಿತ್ ಡ್ರಾ ಮಾಡಿದ ದಿನಾಂಕ, ಸಮಯ ಮತ್ತು ಎಟಿಎಂ ಹೆಸರು (ಸ್ಥಳ) ಬರೆದು, ನೋಟುಗಳ ಮೌಲ್ಯ ನಮೂದಿಸಿ. ಬಳಿಕ ನೋಟುಗಳೊಂದಿಗೆ ಈ ಫಾರಂ ಅನ್ನೂ ಕೊಡಿ. ಅವರು ಅದನ್ನು ಬದಲಾಯಿಸಿ ಕೊಡುತ್ತಾರೆ. ಇದಲ್ಲದೇ ಇದ್ದರೆ, ನಿಮ್ಮ ಹತ್ತಿರದ ಬ್ಯಾಂಕ್ ಶಾಖೆ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಕಚೇರಿಗೆ ಭೇಟಿ ನೀಡಿ ಹರಿದ ನೋಟು ಬದಲಾಯಿಸಬಹುದು.