Latest Kannada Nation & World
ಟೀಮ್ ಇಂಡಿಯಾ ಆಟಗಾರರ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ; ಸಂಕಷ್ಟಕ್ಕೆ ಸಿಲುಕಿದ ಭಾರತ -AUS A vs IND A

ಅಂಪೈರ್ ಮತ್ತು ಇಶಾನ್ ಕಿಶನ್ ನಡುವೆ ಏನಾಯಿತು?
ಚರ್ಚೆಯ ವೇಳೆ, ಅಂಪೈರ್ ಶಾನ್ ಕ್ರೇಗ್ ಮತ್ತು ಇಶಾನ್ ಕಿಶನ್ ನಡುವೆ ಬಿಸಿ ಬಿಸಿ ಚರ್ಚೆ ನಡೆಯಿತು. ಕೊನೆಯದಾಗಿ ಅಂಪೈರ್ ಅವರು, ಇನ್ನು ಚರ್ಚೆ ಬೇಡ ಆಟ ಶುರುವಾಗಲಿ ಎಂದು ಹೇಳಿರುವುದು ಸ್ಟಂಪ್ ಮೈಕ್‌ನಲ್ಲಿ ಕೇಳಿಸಿತು. ಅಂಪೈರ್‌ನ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಇಶಾನ್ ಕಿಶನ್, ನಾವು ಈ ಚೆಂಡಿನೊಂದಿಗೆ ಆಡಲಿದ್ದೇವೆಯೇ? ಇದು ಚರ್ಚೆಯಾಗಿರಲಿಲ್ಲ, ಇದೊಂದು ಮೂರ್ಖತನದ ನಿರ್ಧಾರ ಎಂದು ಹೇಳಿದ್ದಾರೆ. ಅಂಪೈರ್ ಶಾನ್ ಕ್ರೇಗ್ ಅವರು ಭಾರತೀಯ ವಿಕೆಟ್ ಕೀಪರ್ ಅವರ ಈ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ ಮತ್ತು ಅವರು ಈ ವರ್ತನೆಯ ಬಗ್ಗೆ ದೂರು ನೀಡುವುದಾಗಿ ಹೇಳಿದ್ದಾರೆ.