Latest Kannada Nation & World
ಗಂಡ ಅಭಿಷೇಕ್ ಜತೆ ಉಡುಪಿ ಕನಕನ ಕಿಂಡಿ ದರ್ಶನ ಮಾಡಿದ ಬಿಗ್‌ಬಾಸ್ ಕನ್ನಡದ ಗೌತಮಿ ಜಾದವ್

ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಗೌತಮಿ ಜಾದವ್ ಸುಮಾರು ಹದಿನಾರು ವಾರಗಳ ಕಾಲ ಇದ್ದು ಹೊರಬಂದಿದ್ದರು. ಖ್ಯಾತ ಫೋಟೋಗ್ರಾಫರ್ ಅಭಿಷೇಕ್ ಕಾಸರಗೋಡು ಗೌತಮಿಯವರ ಪತಿ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರೀಲ್ಸ್‌ನಲ್ಲಿ ಪತಿ ಅಭಿಷೇಕ್ ಕಾಸರಗೋಡು ಜತೆಗೆ ಉಡುಪಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಭಿಷೇಕ್ ಕೂಡ ಹಲವು ಸಿನಿಮಾಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಆಪರೇಷನ್ ಆಲಮೇಲಮ್ಮ, ಮಾಯಾಬಜಾರ್, ಅನಂತು ವರ್ಸಸ್ ನುಸ್ರುತ್ ಮುಂತಾದ ಸಿನಿಮಾಗಳಲ್ಲಿ ಇವರು ಕಾರ್ಯನಿರ್ವಹಿಸಿದ್ದಾರೆ. ಅಭಿಷೇಕ್ ಕಾಸರಗೋಡು ಅವರು ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಮಗಳು.