Latest Kannada Nation & World
ಕುಣಿಯಲಾರದವನಿಗೆ ನೆಲ ಡೊಂಕೆಂದರಂತೆ! 22 ಪುರೋಹಿತರಿಂದ ವಾಮಾಚಾರ ಮಾಡಿಸಿ ಭಾರತ ಗೆಲ್ತು ಎಂದ ಪಾಕ್ ಮೀಡಿಯಾ, VIDEO

ಕುಣಿಯಲಾರದವನಿಗೆ ನೆಲ ಡೊಂಕು, ಕೈಲಾಗದವನು, ಮೈಯೆಲ್ಲಾ ಪರಚಿಕೂಂಡ – ಈ ಗಾದೆ ಮಾತುಗಳನ್ನು ಕೇಳಿಯೇ ಇರ್ತೀರಿ. ಇದು ಪ್ರಸ್ತುತ ಪಾಕಿಸ್ತಾನಕ್ಕೆ ಪಕ್ಕಾ ಸೂಟ್ ಆಗುತ್ತಿದೆ. ಫೆಬ್ರವರಿ 23ರಂದು ಟೀಮ್ ಇಂಡಿಯಾ ವಿರುದ್ಧ ಸೋತಿದ್ದನ್ನು ಅರಗಿಸಿಕೊಳ್ಳದ ನೆರೆಯ ರಾಷ್ಟ್ರ ಹೊಟ್ಟೆ ಉರಿಯಿಂದ ಏನೇನೋ ಮಾತನಾಡುತ್ತಿದೆ. ತಮ್ಮ ದೇಶದ ಮಾಜಿ ಕ್ರಿಕೆಟರ್ಗಳೇ ಪಾಕಿಸ್ತಾನ ತಂಡದ ಕಳಪೆ ಬ್ಯಾಟಿಂಗನ್ನು ಟೀಕಿಸುತ್ತಿದ್ದರೆ, ಅಲ್ಲಿನ ಮಾಧ್ಯಮಗಳು ದುಬೈಗೆ 22 ಪುರೋಹಿತರನ್ನು ಕರೆಸಿಕೊಂಡು ಮಾಟ-ಮಂತ್ರ ಮಾಡಿಸಿ ಭಾರತ ಗೆದ್ದಿದೆ ಎಂದು ವಿಚಿತ್ರ ಕಾರಣವೊಂದನ್ನು ನೀಡಿದೆ. ಇದು ನಗೆಪಾಟಲಿಗೆ ಕಾರಣವಾಗಿದೆ.