Latest Kannada Nation & World
ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, 10 ಗ್ರಾಂ ಹಳದಿ ಲೋಹದ ಬೆಲೆ 350 ರೂ. ಹೆಚ್ಚಳ, ಬೆಳ್ಳಿ ಬೆಲೆಯಲ್ಲಿ ಸ್ಥಿರತೆ

ಭಾರತದ ಹಲವು ಭಾಗಗಳ ಮಾರುಕಟ್ಟೆಗಳಲ್ಲಿ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,945 ರೂ ಇದ್ದದ್ದು 7,980 ರೂಗೆ ಹೆಚ್ಚಳವಾಗಿದೆ. ರಾಜಧಾನಿ ದೆಹಲಿ ಸಹಿತ ಇತರೆ ಕಡೆಗಳಲ್ಲಿ ಆಭರಣ ಚಿನ್ನದ ಬೆಲೆ ಗ್ರಾಂಗೆ 8,000 ರೂ ಗಡಿ ಸಮೀಪಿಸದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 79,800 ರುಪಾಯಿ ಇದ್ದರೆ, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 87,060 ರುಪಾಯಿ ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿ ಬೆಲೆ 9,950 ರೂಪಾಯಿಯಷ್ಟಿದೆ.