Astrology
ಹೊಳೆನರಸೀಪುರದಲ್ಲಿ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮೀಜಿಗಳ 144ನೇ ಜಯಂತ್ಯುತ್ಸವ; ಡಿಸೆಂಬರ್ 15 ರಿಂದ ವೇದಾಂತ ಸಪ್ತಾಹ ಮಹೋತ್ಸವ

ವೇದಾಂತ ಸಪ್ತಾಹ ಮಹೋತ್ಸವದಲ್ಲಿ ಪ್ರತಿದಿನ ಬೆಳಗ್ಗೆ 6.30ರಿಂದ 7.15ರ ವರೆಗೆ ಅಭಿಷೇಕ ಮತ್ತು ಪೂಜೆ, ಬೆಳಗ್ಗೆ 7.15 ರಿಂದ 7.50 ರವರೆಗೆ ಭಜನೆ, ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ, ಬೆಳಗ್ಗೆ 8 ರಿಂದ 9 ಗಂಟೆಯವರಿಗೆ ಪ್ರಸ್ಥಾನತ್ರಯಭಾಷ್ಯ ಗ್ರಂಥಗಳನ್ನು ಕುರಿತು ಉಪನ್ಯಾಸಗಳು, 10.30 ರಿಂದ 11.30 ವರೆಗೆ ಮತ್ತು ಸಂಜೆ 4 ರಿಂದ 5 ಗಂಟೆಯವರಿಗೆ ಪ್ರವಚನ, ಪುರಾಣ ಹಾಗೂ ಸಂಜೆ 6.46 ರಿಂದ 7.45 ರ ವರೆಗೆ ಭಜನೆ ಕಾರ್ಯಗಳನ್ನು ನೆರವೇರುತ್ತವೆ ಎಂದು ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.