Latest Kannada Nation & World
ಭಾರತ vs ಆಸ್ಟ್ರೇಲಿಯಾ, ಸೌತ್ ಆಫ್ರಿಕಾ vs ನ್ಯೂಜಿಲೆಂಡ್; ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ವೇಳಾಪಟ್ಟಿ ಇಲ್ಲಿದೆ

ನ್ಯೂಜಿಲೆಂಡ್ ‘ಎ’ ಗುಂಪಿನಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಗೆದ್ದು ಸೆಮೀಸ್ಗೆ ಅರ್ಹತೆ ಪಡೆದುಕೊಂಡಿತು. ಆದರೆ ಅಂತಿಮ ಲೀಗ್ ಪಂದ್ಯದಲ್ಲಿ ಗೆದ್ದು ಬೀಗುವ ಲೆಕ್ಕಾಚಾರದಲ್ಲಿದ್ದ ಕಿವೀಸ್, ಭಾರತ ವಿರುದ್ಧ ಸೋಲನುಭವಿಸಿತು. 2000ರ ಚಾಂಪಿಯನ್ಸ್ ಟ್ರೋಫಿಯ ಭಾರತ – ಕಿವೀಸ್ ಮುಖಾಮುಖಿಯಾಗಿದ್ದವು. ಅಂದು ಕಿವೀಸ್ ಭಾರತ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಇದೀಗ ನ್ಯೂಜಿಲೆಂಡ್, ಎರಡನೇ ಸೆಮೀಸ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದು, ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಎ ಗುಂಪಿನಲ್ಲಿ 4 ಅಂಕ ಪಡೆದು 2ನೇ ಸ್ಥಾನ ಪಡೆದಿತ್ತು.