Latest Kannada Nation & World
ಯಶಸ್ವಿ ಜೈಸ್ವಾಲ್-ವಿರಾಟ್ ಕೊಹ್ಲಿ ಶತಕದ ಜೊತೆಯಾಟ; 2ನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಮೇಲುಗೈ

ಉತ್ತಮ ಜೊತೆಯಾಟವಾಡುತ್ತಿದ್ದ ಜೈಸ್ವಾಲ್ ಮತ್ತು ಕೊಹ್ಲಿ, ಸಂವಹನ ಸಮಸ್ಯೆಯಿಂದಾಗಿ ವಿಕೆಟ್ ಕಳೆದುಕೊಳ್ಳುವಂತಾಯ್ತು. ಚೆಂಡನ್ನು ನೇರವಾಗಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಬಳಿಗೆ ಹೊಡೆದ ಜೈಸ್ವಾಲ್, ನಾನ್‌ಸ್ಟ್ರೈಕ್ ಬಳಿ ಇದ್ದ ವಿರಾಟ್‌ಗೆ ಸಿಂಗಲ್ ಓಡುವಂತೆ ಕರೆ ನೀಡಿದರು. ಆದರೆ, ಕೊಹ್ಲಿ ಬೇಡ ಎಂದರು. ಅಷ್ಟರಲ್ಲೇ ನಾನ್‌ಸ್ಟ್ರೈಕ್ ಬಳಿ ಓಡಿ ಬಂದಿದ್ದ ಜೈಸ್ವಾಲ್ ಅವರನ್ನು, ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ರನೌಟ್ ಮಾಡಿದರು. ಹೀಗಾಗಿ ಯಶಸ್ವಿ ಅನಗತ್ಯವಾಗಿ ವಿಕೆಟ್ ಒಪ್ಪಿಸಬೇಕಾಯ್ತು.