Astrology
ವಾಯುದೇವನ ಅನುಗ್ರಹದಿಂದ ಭೀಮನಿಗೆ ಜನ್ಮ ನೀಡಿದ ಕುಂತಿ, ಅದೇ ದಿನ ಗಾಂಧಾರಿಗೆ ಜನಿಸಿದ ದುರ್ಯೋಧನ-indian mythology kunti gave birth to bhima with help of vayu deva birth of duryodhana mahabharata stories rsm ,ರಾಶಿ ಭವಿಷ್ಯ ಸುದ್ದಿ

ಮಾನವರು, ಪ್ರಾಣಿಗಳು, ಕ್ರಿಮಿ ಕೀಟಗಳು ಮಾತ್ರವಲ್ಲದೆ ಸಸ್ಯವರ್ಗಕ್ಕೂ ಆಧಾರವಾಗಿ ಜೀವವನ್ನು ನೀಡುತ್ತಿರುವ ಸಾಕ್ಷಾತ್ ವಾಯುದೇವರ ಮಂತ್ರವನ್ನು ಕುಂತಿ ಪಠಿಸುತ್ತಾಳೆ. ಇವಳ ಭಕ್ತಿಗೆ ಮೆಚ್ಚಿದ ವಾಯುದೇವನು ಪ್ರತ್ಯಕ್ಷನಾಗುತ್ತಾನೆ. ಮೂರು ಲೋಕಗಳಲ್ಲಿಯೇ ಅತಿ ಶಕ್ತಿಶಾಲಿಯಾದಂತಹ ಮಗುವೊಂದನ್ನು ವಾಯುದೇವನು ಅನುಗ್ರಹಿಸುತ್ತಾನೆ. ವಾಯುದೇವನಿಂದ ಪಾಂಡು ಮತ್ತು ಕುಂತಿಗೆ ಜನಿಸಿದ ಮಗುವಿನ ಬಗ್ಗೆ ತಿಳಿದು ಹಸ್ತಿನಾವತಿ ಜನರು ಸಂಭ್ರಮಾಚರಣೆ ಮಾಡುತ್ತಾರೆ. ಈ ಮಗುವೇ ಇಡೀ ಕೌರವ ಕುಲಕ್ಕೆ ಸವಾಲಾಗಿ ನಿಂತ ಬಲಶಾಲಿ ಭೀಮಸೇನ. ಶ್ರಾವಣ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಮಖಾ ನಕ್ಷತ್ರದಲ್ಲಿ ಭೀಮ ಜನಿಸುತ್ತಾನೆ.