Latest Kannada Nation & World
ಮೊದಲ ರಾತ್ರಿಯೇ ಕರಾಳ ರಾತ್ರಿಯಾದಾಗ! ನೇರವಾಗಿ ಒಟಿಟಿಗೆ ಬರುತ್ತಿದೆ ಕಾಮಿಡಿ ಕ್ರೈಂ ಥ್ರಿಲ್ಲರ್ ಧೂಮ್ ಧಾಮ್ ಸಿನಿಮಾ

ಧೂಮ್ ಧಾಮ್ ಟ್ರೇಲರ್ ಹೇಗಿದೆ?
ಕೊಯಲ್ (ಯಾಮಿ ಗೌತಮ್) ಮತ್ತು ವೀರ್ (ಪ್ರತೀಕ್ ಗಾಂಧಿ) ಧೂಮ್ ಧಾಮ್ ಆಗಿ ಮದುವೆಯಾಗಿ ಹೊಟೇಲ್ವೊಂದರಲ್ಲಿ ಮೊದಲ ರಾತ್ರಿಯ ಕೋಣೆ ಸೇರಿರುತ್ತಾರೆ. ಏಕಾಂತದಲ್ಲಿರುವಾಗಲೇ, ಬಾಗಿಲ ಬೆಲ್ ಹೊಡೆಯುತ್ತಿದೆ. ಯಾರು ಎಂದು ಬಾಗಿಲು ತೆರೆಯುತ್ತಿದ್ದಂತೆ, ಚಾರ್ಲಿ ಎಲ್ಲಿದ್ದಾನೆ ಎಂದು ಕೈಯಲ್ಲಿ ಗನ್ ಹಿಡಿದಾತ ಕೇಳುತ್ತಾನೆ? ಮುಗ್ಧ ವೀರ್, ಚಾರ್ಲಿ ಯಾರು ಎಂದು ಕೇಳುತ್ತಾನೆ. ಅವನ ಬಗ್ಗೆ ಗೊತ್ತಿದ್ದ ಕೋಯಲ್ ಕೊಂಚ ಗಾಬರಿಯಾಗುತ್ತಾಳೆ. ಅಲ್ಲಿಂದ ಈ ದಂಪತಿಗೆ ಒಂದಾದ ಮೇಲೊಂದು ಸಮಸ್ಯೆ ಶುರುವಾಗುತ್ತಲೇ ಹೋಗುತ್ತದೆ.