Latest Kannada Nation & World
ಆರೋಪಿ ಮನೆ ನೆಲಸಮ ಮಾಡುವ ಬುಲ್ ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ಬ್ರೇಕ್

ಸರಿಯಾದ ಮಾರ್ಗಸೂಚಿಯನ್ನು ಅನುಸರಿಸದೆ, ಕಟ್ಟಡಗಳನ್ನು ನೆಲಸಮಗೊಳಿಸುವ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕೆಲ ರಾಜ್ಯಗಳ ಆಡಳಿತ ಯಂತ್ರಗಳು ತಾವೇ ನ್ಯಾಯಾಧೀಶರಾಗುವಂತಿಲ್ಲ. ಅಂಥದ್ದೇನಾದರೂ ಮಾಡಿದರೆ, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ಆರೋಪಿಗಳ ಮನೆ ನೆಲಸಮವನ್ನು ಕಾನೂನು ಪ್ರಕಾರ ಮಾಡದೇ ಇದ್ದರೆ, ಅವರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಸೂಚಿಸಿದೆ.