Astrology
ಸೀನು, ಬಿಕ್ಕಳಿಕೆ ಬಂದ್ರೆ ನಮ್ಮಿಷ್ಟದವರು ನಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದರ್ಥವೇ, ಈ ಬಗ್ಗೆ ಜ್ಯೋತಿಷ್ಯ ಹೇಳೋದೇನು ನೋಡಿ

ದೈನಂದಿನ ಜೀವನದಲ್ಲಿ ಮನುಷ್ಯ ಅನೇಕ ರೀತಿಯ ಜನರನ್ನು ಸಂಪರ್ಕಿಸುತ್ತಾನೆ. ಅವರಲ್ಲಿ ಕೆಲವರ ಜೊತೆ ಉತ್ತಮ ಬಾಂಧವ್ಯ, ಸಂಬಂಧಗಳು ಬೆಳೆಯುತ್ತವೆ. ಕೆಲವು ಸಂದರ್ಭಗಳಲ್ಲಿ ಅವರು ನಮ್ಮ ಜೀವನದ ಭಾಗವೇ ಆಗಿ ಬಿಡುತ್ತಾರೆ. ಹೀಗೆ ಹತ್ತಿರವಾದ ವ್ಯಕ್ತಿಗಳು ನಮ್ಮ ಬಗ್ಗೆಯೇ ಯೋಚಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬ ಯೋಚನೆಗೆ ಬಿದ್ದು ಸಮಯವನ್ನು ಕಳೆಯುತ್ತಾರೆ. ಆಧ್ಯಾತ್ಮಿಕ ವಿಜ್ಞಾನದ ಪ್ರಕಾರ, ಇತರರು ನಮ್ಮ ಬಗ್ಗೆ ಯೋಚಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ನೇರವಾಗಿ ತಿಳಿದಿಲ್ಲದಿದ್ದರೂ ಸಹ, ಬ್ರಹ್ಮಾಂಡವು ನಮಗೆ ಕೆಲವು ರೀತಿಯ ಚಿಹ್ನೆ ಅಥವಾ ಸಂಕೇತಗಳನ್ನು ನೀಡುತ್ತದೆ. ಆಧ್ಯಾತ್ಮದ ಕಡೆಗೆ ಒಲವುಳ್ಳವರು ಈ ಚಿಹ್ನೆಗಳನ್ನು ನಿಜವೆಂದ ನಂಬಬಹುದು. ಆದರೆ ಆಧ್ಯಾತ್ಮದ ಬಗ್ಗೆ ನಂಬಿಕೆ ಇಲ್ಲದವರು ಅವುಗಳನ್ನು ನಂಬುವುದಿಲ್ಲ. ಆದಾಗ್ಯೂ, ಈ ಚಿಹ್ನೆಗಳನ್ನು ನಾವು ಯಾವ ರೀತಿಯಲ್ಲಿ ಅರ್ಥಮಾಡಿಕೊಳ್ಳುತ್ತೇವೆ ಎಂಬುದು ನಮ್ಮ ನಂಬಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ.