Latest Kannada Nation & World
ಬಳ್ಳಾರಿ ಮಹಿಳೆ ಸೇರಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ, 41ಕ್ಕೂ ಹೆಚ್ಚು ಜನರು ಅಸ್ವಸ್ಥ; ಘಟನೆ ಕುರಿತ ಈವರೆಗಿನ ವಿವರ

ಘಟನೆಯಲ್ಲಿ ಮೃತಪಟ್ಟವರ ವಿವರ
ಕಾಲ್ತುಳಿತದಲ್ಲಿ ವಿಶಾಖಪಟ್ಟಣ ಜಿಲ್ಲೆಯ ನರಸೀಪಟ್ಟಣದ ಬುಡ್ಡೇತಿ ನಾಯ್ಡು ಬಾಬು, ರಜಿನಿ, ಲಾವಣ್ಯ, ವಿಶಾಖಪಟ್ಟಣದ ಶಾಂತಿ ಮತ್ತು ಬಳ್ಳಾರಿಯ ಶಾಂತಿ ಮೃತಪಟ್ಟಿದ್ದು, ಇದಕ್ಕೂ ಮುನ್ನ ತಮಿಳುನಾಡಿನ ಸೇಲಂನ ಮಲ್ಲಿಕಾ ಸಾವನ್ನಪ್ಪಿದ್ದರು.ಇದಲ್ಲದೇ ತಿರುಪತಿಯ ಮೂರು ಭಾಗಗಳಲ್ಲಿ ಭಕ್ತರ ನಡುವೆ ಮಾರಾಮಾರಿ ನಡೆದಿದ್ದು, ತಮಿಳುನಾಡಿನ ಸೇಲಂನ ಭಕ್ತರೊಬ್ಬರು ಶ್ರೀನಿವಾಸಂನಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 41ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಗಾಯಾಳುಗಳನ್ನು ರುಯಾ ಹಾಗೂ ಸ್ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.