Latest Kannada Nation & World
ಅಯ್ಯೋ ವಿಧಿಯೇ! ಸಮಂತಾ ರುತ್ ಪ್ರಭು ಮನೆಯಲ್ಲಿ ಸೂತಕ, ಮಾಜಿ ಪತಿ ನಾಗಚೈತನ್ಯ ಮನೆಯಲ್ಲಿ ಮದುವೆ ಸಂಭ್ರಮ

ಡಿವೋರ್ಸ್ ಬಳಿಕ ಅಪ್ಪನ ಹೇಳಿದ್ದೇನು?
ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಬಳಿಕ ಸಮಂತಾ ಅವರ ತಂದೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದೀಗ ಅವರ ಅಂದಿನ ಮಾತು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದೆ. “ಬಹಳ ಹಿಂದೆಯೇ, ಒಂದು ಕಥೆ ಇತ್ತು. ಆ ಕಥೆ ಇನ್ನು ಮುಂದೆ ಅಸ್ತಿತ್ವದಲ್ಲಿ ಇರಲ್ಲ! ಆದ್ದರಿಂದ, ಹೊಸ ಕಥೆಯನ್ನು ಪ್ರಾರಂಭಿಸೋಣ; ಹೊಸ ಅಧ್ಯಾಯದೊಂದಿದೆ! ನನ್ನ ನೋವಿನಿಂದ ಹೊರಬರಲು ನನಗೆ ತುಂಬ ಸಮಯ ಹಿಡಿಯಿತು. ಬದುಕು ತುಂಬ ಚಿಕ್ಕದು, ಅದೇ ನೋವಿನ ಜತೆಗೆ ಕುಳಿತುಕೊಳ್ಳುವುದು ಅಸಾಧ್ಯ” ಎಂದಿದ್ದರು.