Astrology
ವರನಟ ಡಾ ರಾಜ್ ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ 10 ಸುಮಧುರ ಕನ್ನಡ ಭಕ್ತಿ ಗೀತೆಗಳು ಇಲ್ಲಿವೆ
ಮಂಡಲ ಮಕರ ಜ್ಯೋತಿ ಪೂಜೆಗಾಗಿ ಶಬರಿಮಲೆಯಲ್ಲಿ 2024ರ ನವೆಂಬರ್ 15 ರಿಂದ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಲಕ್ಷಾಂತರ ಮಂದಿ ಭಕ್ತರು ಈಗಾಗಲೇ ಮಾಲೆಯನ್ನು ಧರಿಸಿ ಅಯ್ಯಪ್ಪನ ದರ್ಶನ ಪಡೆಯಲು ಶಬರಿಮಲೆಗೆ ತೆರೆಳುತ್ತಿದ್ದಾರೆ. ಮಾಲಾಧಾರಿಗಳು ಪ್ರತಿನಿತ್ಯ ಅಯ್ಯಪ್ಪನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಭಜನೆ ಮಾಡುತ್ತಿದ್ದಾರೆ. ಸ್ವಾಮಿ ಶರಣಂ, ಅಯ್ಯಪ್ಪ ಶರಣಂ, ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುತ್ತ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅಯ್ಯಪ್ಪನ ಭಕ್ತರು ಭಕ್ತಿ ಗೀತೆಗಳನ್ನು ಕೇಳುವುದು ಸಹಜ. ಇಂತಹ ಭಕ್ತರಿಗಾಗಿ ಡಾ ರಾಜ್ ಕುಮಾರ್ ಅವರು ಹಾಡಿರುವ ಪ್ರಮುಖ 10 ಅಯ್ಯಪ್ಪ ಸ್ವಾಮಿಯ ಕನ್ನಡ ಭಕ್ತಿ ಗೀತೆಗಳನ್ನು ಇಲ್ಲಿ ನೀಡಲಾಗಿದೆ. ಈ ಸುಮಧುರ ಗೀತೆಗಳನ್ನು ಪ್ರತಿಯೊಬ್ಬ ಅಯ್ಯಪ್ಪನ ಭಕ್ತರು ಇಷ್ಟಪಡುತ್ತಾರೆ.