Latest Kannada Nation & World
ಕುಟುಂಬದ ಜವಾಬ್ದಾರಿ ಜೊತೆಗೆ ಮ್ಯಾಜಿಶಿಯನ್ ಆಗಬೇಕೆಂಬ ಕನಸು ನನಸಾಗಿಸಲು ಗೃಹಿಣಿಯ ಹೋರಾಟವಿದು

ತನ್ನ ಗುರಿಯನ್ನು ತಲುಪಲು ಮಹಿಳೆಯರು ನಡೆಸುವ ಹೋರಾಟಗಳ ಬಗ್ಗೆ ಈವರೆಗೆ ಹಲವಾರು ಸಿನಿಮಾಗಳು, ನಾಟಕಗಳು ಬಂದಿವೆ. ಕುಟುಂಬದ ಜವಾಬ್ದಾರಿಯ ಜೊತೆಗೆ ವಿಭಿನ್ನವಾದ ಕನಸನ್ನು ನನಸು ಮಾಡಿಕೊಳ್ಳಲು ಹೊರಟ ದಿವ್ಯಾಂಕಾ ತ್ರಿಪಾಠಿ ಅವರ ಪಾತ್ರ ದಿ ಮ್ಯಾಜಿಕ್ ಆಫ್ ಶಿರಿ ವೆಬ್ ಸರಣಿಯಲ್ಲಿ ವಿಶೇಷವಾಗಿದೆ. ಸರಣಿಯಲ್ಲಿ ಸವಾಲುಗಳ ಪಾತ್ರಗಳನ್ನೇ ತುಂಬಿರುವ ದಿ ಮ್ಯಾಜಿಕ್ ಆಫ್ ಶಿರಿ ಬಿಡುಗಡೆಗೆ ಈ ಹಿಂದೆ ಅಡ್ಡಿ ಆತಂಕಗಳನ್ನು ಎದುರಿಸಿತ್ತು. ದಿವ್ಯಾಂಕಾ ತ್ರಿಪಾಠಿ ಮತ್ತು ಜಾವೇದ್ ಜಾಫ್ರಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ವೆಬ್ ಸೀರೀಸ್ ಬಿಡುಗಡೆಗೆ ಜೈನ ಸಮುದಾಯ ವಿರೋಧ ವ್ಯಕ್ತಪಡಿಸಿತ್ತು. ಎಲ್ಲಾ ವಿವಾದಗಳು, ಸವಾಲುಗಳನ್ನು ಮೆಟ್ಟಿನಿಂತು ದಿ ಮ್ಯಾಜಿಕ್ ಆಫ್ ಶಿರಿ ವೆಬ್ ಸರಣಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ.