ಸುಬ್ಬು ಮದುವೆ ರಹಸ್ಯ ತಿಳಿಯುವ ಹಟದಲ್ಲಿ ಶ್ರೀವಲ್ಲಿ, ಇಂದ್ರಮ್ಮನ ಸವಾಲು ವರಲಕ್ಷ್ಮೀ ಬದುಕಿಗೆ ಉರುಳಾಗುತ್ತಾ; ಶ್ರಾವಣಿ ಸುಬ್ರಹ್ಮಣ್ಯ

ಅಳಿಯನ ಬಳಿ ಸುಬ್ಬುವೇ ಶ್ರಾವಣಿಯ ಗಂಡ ಎಂದ ಲಲಿತಾದೇವಿ
ಮೊಮ್ಮಗಳನ್ನು ಕಂಡು ಅವಳಿಗೆ ಬಟ್ಟೆ ಕೊಟ್ಟು ಬರಬೇಕು ಎಂದು ಬ್ಯಾಗ್ ಹಿಡಿದು ಹೊರಟ ಲಲಿತಾದೇವಿಗೆ ಎದುರಾಗುತ್ತಾನೆ ವೀರೇಂದ್ರ. ಅವನಿಗೆ ತನ್ನ ಅತ್ತೆ ಶ್ರಾವಣಿಯನ್ನೇ ನೋಡಲು ಹೋಗುತ್ತಿರುವುದು ಎಂಬುದು ಅರಿವಾಗುತ್ತದೆ. ಅವರ ಬಳಿ ತಾನು ಹಿಂದೆ ಮಾಡಿದ ತಪ್ಪು ಈಗ ಸುಬ್ಬು ಮಾಡಿದ್ದಾನೆ. ಆಗ ನಿಮಗಾದ ನೋವನ್ನು ನಾನು ಈಗ ಅನುಭವಿಸುತ್ತಿದ್ದೇನೆ ಎನ್ನುವ ವೀರೇಂದ್ರ ‘ಅತ್ತೆಯವರೇ, ನೀವು ನನ್ನ ಮಗ ಎಂದು ಕರೆದಿದ್ದೀರಿ, ಈ ಮಗನ ಮಾತಿಗೆ ನೀವು ಬೆಲೆ ಕೊಡುವುದದಾರೆ ದಯವಿಟ್ಟು ಅವಳನ್ನು ನೋಡಲು ಹೋಗಬೇಡಿ‘ ಎಂದು ವಿನಂತಿಸಿಕೊಳ್ಳುತ್ತಾನೆ. ವೀರು ಮಗ ಎಂದಿದ್ದು ಲಲಿತಾದೇವಿಯವರನ್ನು ತಡೆದು ನಿಲ್ಲಿಸುತ್ತದೆ. ಆಗ ವೀರೇಂದ್ರನ ಬಳಿ ‘ಈಗ ನೀನು ಮಗ ಎಂದು ಹೇಳಿ ನನ್ನನ್ನು ಕಟ್ಟು ಹಾಕಿದೆ. ಆದರೆ ಒಂದು ವಿಚಾರ ನೆನಪಿಟ್ಟುಕೊ, ಯಾರು ಏನೇ ಹೇಳಿದ್ರು ಸುಬ್ಬುವೇ ನನ್ನ ಮೊಮ್ಮಗಳು ಶ್ರಾವಣಿಯ ಗಂಡ, ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಮದುವೆಗೆ ನಮ್ಮ ಸಂಪೂರ್ಣ ಸಹಮತವಿದೆ‘ ಎಂದು ಹೇಳಿ ಶ್ರಾವಣಿ ನೋಡಲು ಹೊರಟ ನಿರ್ಧಾರವನ್ನು ಕೈ ಬಿಟ್ಟು ತಮ್ಮ ಕೋಣೆಗೆ ನಡೆಯುತ್ತಾರೆ.