Latest Kannada Nation & World
ರಘು ಶಿವಮೊಗ್ಗ ನಿರ್ದೇಶನದ 3ನೇ ಚಿತ್ರಕ್ಕೆ ಮುಹೂರ್ತ; ದಿ ಟಾಸ್ಕ್ ಸಿನಿಮಾದಲ್ಲಿ ಹೊಸ ಪ್ರತಿಭೆಗಳ ಅನಾವರಣ

ನೈಜ ಘಟನೆ ಆಧಾರಿತ ಸಿನಿಮಾ
ದಿ ಟಾಸ್ಕ್ ಸಿನಿಮಾ ನೈಜ ಘಟನೆ ಸ್ಫೂರ್ತಿ ಆಧಾರಿತ ಸಿನಿಮಾ. ಈ ಹಿಂದೆ ರಘು ಶಿವಮೊಗ್ಗ ನಿರ್ದೇಶನದ ಪೆಂಟಗನ್‌ನಲ್ಲಿ ಹೀರೋ ಆಗಿ ಅಭಿನಯಿಸಿದ್ದ ಸಾಗರ್ ಹಾಗೂ ಭೀಮ ಚಿತ್ರದಲ್ಲಿ ಖಳನಾಯಕನಾಗಿ ಪರಿಚಯರಾಗಿದ್ದ ಜಯಸೂರ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಶ್ರೀಲಕ್ಷ್ಮೀ, ಅರವಿಂದ್ ಕುಪ್ಳಿಕರ್, ಬಿಂಬಶ್ರೀ ನೀನಾಸಂ, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಘು ಶಿವಮೊಗ್ಗ ಈ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ಅಲ್ಲದೆ, ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಘು ಅವರ ದಿ ಟಾಸ್ಕ್ ಚಿತ್ರಕ್ಕೆ ಲೋಕಪೂಜ್ಯ ಪಿಕ್ಚರ್ ಹೌಸ್ ಸಂಸ್ಥೆ ಅಡಿ ನಿರ್ಮಾಪಕ ವಿಜಯ್ ಕುಮಾರ್ ಹಾಗೂ ರಾಮಣ್ಣ ಬಂಡವಾಳ ಹೂಡುತ್ತಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದು, ಮಡಿಕೇರಿ, ಬೆಂಗಳೂರು ಹಾಗೂ ಸುತ್ತಮುತ್ತ ಚಿತ್ರೀಕರಣ ನಡೆಸಲಿದೆ.