Astrology
ಅಂಗೈ ಮೇಲೆ ಕಮಲದ ಚಿಹ್ನೆ ಇದೆಯಾ ನೋಡಿ ಒಮ್ಮೆ, ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಇದೇನು ಹೇಳುತ್ತೆ ನೋಡೋಣ
ಅಂಗೈ ಮೇಲೆ ಕಮಲದ ಚಿಹ್ನೆ ಇದೆಯಾ ನೋಡಿ ಒಮ್ಮೆ
ಅಂಗೈಯಲ್ಲಿ ಕಮಲದ ಚಿಹ್ನೆ ಇದೆಯಾ? ನೋಡ್ಕೊಂಡ್ರಾ, ಅಂಗೈಯಲ್ಲಿ ಕಮಲದ ನಿಶಾನೆ ಅಥವಾ ಚಿಹ್ನೆ ಇರುವುದು ಶುಭ. ಈ ಚಿಹ್ನೆಯು ಮಹಾವಿಷ್ಣುವಿನ ಸಂಕೇತ. ಅಂಗೈಯಲ್ಲಿ ಈ ಚಿಹ್ನೆ ಕಂಡುಬಂದರೆ ಅಂತಹ ವ್ಯಕ್ತಿಗೆ ವಿಷ್ಣು ಯೋಗ ಇದೆ ಎಂದು ನಂಬಲಾಗುತ್ತದೆ. ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಅಂಗೈ ಮೇಲೆ ಕಮಲದ ಗುರುತು ಹೊಂದಿದ್ದರೆ, ಅಂತಹ ವ್ಯಕ್ತಿಯು ವಿಷ್ಣು ದೇವರ ಕೃಪೆಗೆ ಪಾತ್ರನಾಗಿದ್ದು, ಆಶೀರ್ವದಿಸಲ್ಪಟ್ಟಿದ್ದಾನೆ ಎಂದು ನಂಬಲಾಗುತ್ತದೆ. ಅಂತಹ ವ್ಯಕ್ತಿಗಳನ್ನು ಭಾರಿ ಅದೃಷ್ಟವಂತರು ಮತ್ತು ಶ್ರೀಮಂತರು ಎಂದು ಪರಿಗಣಿಸಲಾಗುತ್ತದೆ. ಅವರು ಸಂಪತ್ತು ಮತ್ತು ಸಮೃದ್ಧಿಯ ಮಾಲೀಕರಾಗುವರು ಎಂಬುದು ನಂಬಿಕೆ. ಅಂಗೈ ಮೇಲೆ ಕಮಲದ ಚಿಹ್ನೆ ಇರುವಂಥವರು ಉತ್ತಮ ವಾಗ್ಮಿಗಳಾಗಿದ್ದು, ಅವರಲ್ಲಿ ಉತ್ತಮ ನಾಯಕತ್ವದ ಗುಣವನ್ನೂ ಕಾಣಬಹುದು ಎಂದು ಶಾಸ್ತ್ರ ಹೇಳುತ್ತದೆ. ಅಷ್ಟೇ ಅಲ್ಲ, ಅಂಗೈ ಮೇಲಿನ ಕಮಲದ ಚಿಹ್ನೆಯು ರಾಜಲಕ್ಷ್ಮಿ ಯೋಗದ ಅಂಶವೆಂದು ಪರಿಗಣಿಸಲಾಗುತ್ತದೆ.