ಅಂತರಂಗದಿಂದ ಶುದ್ದಿ ಮಾಡಿಕೊಳ್ಳಲು ಪ್ರತಿಯೊಬ್ಬ ಮನುಷ್ಯನಿಗೂ ಸಕಾಲ ಈ ಚಾತುರ್ಮಾಸ್ಯ

ನೂರಾರು ಭಕ್ತರ ನಡುವೆ ಇಂದು ಪ್ರಾರಂಭವಾದ ಚಾತುರ್ಮಾಸ್ಯ ವ್ರತವು ಭಕ್ತರನ್ನು ಬೇರೊಂದು ಲೋಕಕ್ಕೆ ಕರೆದೋಯಿತು. ಇದೇ ಸಂದರ್ಭದಲ್ಲಿ ಸಂದೇಶವನ್ನು ನೀಡಿದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು ‘ಅಂತರಂಗದಿಂದ ಶುದ್ದಿ ಮಾಡಿಕೊಳ್ಳಲು ಪ್ರತಿಯೊಬ್ಬ ಮನುಷ್ಯನಿಗೂ ಸಕಲ ಈ ಚಾತುರ್ಮಾಸ್ಯ. ಆದ್ದರಿಂದ ನಿಮ್ಮ ಚೌಕಟ್ಟಿನ ಒಳಗೆ, ನಿಮ್ಮ ನಿಮ್ಮ ಇತಿ ಮಿತಿಯೊಳಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಅಂತರಂಗ ಶುದ್ದಿ ಮಾಡಿಕೊಳ್ಳಬೇಕು. ಜಪ ಇರಬಹುದು, ಪೂಜೆ ಪುನಸ್ಕಾರಗಳಿರಬಹುದು, ವೃತಗಳಿರಬಹುದು ಅಥವಾ ಪಾರಾಯಣವಿರಬಹುದು ಈ ಸಂಧರ್ಭದಲ್ಲಿ ಮಾಡಿದಾಗ ಅಂತರಂಗ ಶುದ್ದಿಯಾಗುತ್ತೆ. ಅಂತರಂಗ ಶುದ್ದಿಯಾದಾಗ ಮನುಷ್ಯನಿಗೆ ಮನಸ್ಸು ಶುದ್ದಿಯಾಗುತ್ತೆ. ಮನಸ್ಸು ಶುದ್ದಿಯಾದಾಗ ಎಲ್ಲವೂ ಮನೆಯಲ್ಲಿ ಅರೋಗ್ಯ ಇರುತ್ತದೆ, ಮನೆ ಮಂದಿಯಲ್ಲಿ ಒಳ್ಳೆ ರೀತಿಯ ಸಂಬಂಧಗಳು ಬೆಳೆಯುತ್ತವೆ, ಮಕ್ಕಳು ನಮ್ಮ ಮಾತನ್ನು ಕೇಳ್ತಾರೆ, ಮಕ್ಕಳಿಗೆ ಒಳ್ಳೆ ವಿದ್ಯೆ ಬರುತ್ತದೆ. ಮನುಷ್ಯ ಮಾನವತ್ವವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಚೆನ್ನಾಗಿ ಬದುಕಬೇಕು. ಇವುಗಳಿಗೆ ಈ ಚಾತುರ್ಮಾಸ್ಯ ಸರಿಯಾದ ಕಾಲ’ ಎಂದು ನುಡಿದರು.