Latest Kannada Nation & World
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ರವಿಚಂದ್ರನ್ ಅಶ್ವಿನ್
ಕ್ಲಬ್ ಕ್ರಿಕೆಟ್‌ನಲ್ಲಿ ಆಡುತ್ತೇನೆ
“ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ದಿನ. ಬಹಳಷ್ಟು ನೆನಪುಗಳೊಂದಿಗೆ ನಾನು ವಿದಾಯ ಹೇಳುತ್ತಿದ್ದೇನೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಹಲವು ನೆನೆಪುಗಳಿವೆ. ನಾನು ಬಹಳಷ್ಟು ಜನರಿಗೆ ಧನ್ಯವಾದ ಹೇಳಬೇಕು. ಬಿಸಿಸಿಐ, ನನ್ನ ಸಹ ಆಟಗಾರರು, ಎಲ್ಲಾ ತರಬೇತುದಾರರಿಗೆ ಧನ್ಯವಾದಗಳು. ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ದಿನ. ಆದರೆ ನಾನು ಕ್ಲಬ್ ಕ್ರಿಕೆಟ್ ಆಡುತ್ತೇನೆ,” ಎಂದು ಅಶ್ವಿನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.