Latest Kannada Nation & World
ಅಕ್ಟೋಬರ್ 1 ರಿಂದ ಆಧಾರ್ ಸೇರಿ ಈ ಆರು ಆದಾಯ ತೆರಿಗೆ ನಿಯಮ ಬದಲಾವಣೆ ಆಗುತ್ತೆ, ಮಾಹಿತಿಗಾಗಿ ಈಗಲೇ ಒಮ್ಮೆ ಚೆಕ್ ಮಾಡ್ಕೊಳ್ಳಿ

ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಮಂಡಿಸಿದ ಬಜೆಟ್ನಲ್ಲಿ ಆದಾಯ ತೆರಿಗೆ ನಿಯಮ ಪರಿಷ್ಕರಣೆ ಘೋಷಿಲಾಗಿತ್ತು. ಈ ಪೈಕಿ ಕೆಲವು ನಿಯಮಗಳು ಇದೇ ಅಕ್ಟೋಬರ್ 1 ರಿಂದ ಚಾಲ್ತಿಗೆ ಬರಲಿದೆ. ಇದರಲ್ಲಿ ಸೆಕ್ಯುರಿಟೀಸ್ ವಹಿವಾಟು ತೆರಿಗೆ (ಎಸ್ಟಿಟಿ), ಮೂಲದಲ್ಲಿ ತೆರಿಗೆ ಕಡಿತ ಅಥವಾ ಟಿಡಿಎಸ್ ದರಗಳು ಮತ್ತು ಆಧಾರ್ ಕಾರ್ಡ್ ಬಳಕೆಯ ಸುತ್ತಲಿನ ಹೊಸ ನಿಯಮಗಳು ಸೇರಿವೆ. ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಯೋಜನೆ 2024 ಕೂಡ ಜಾರಿಗೊಳ್ಳುತ್ತಿದ್ದು, ಇದು ಆದಾಯ ತೆರಿಗೆ ವಿವಾದಗಳ ಪರಿಹಾರವನ್ನು ಸರಳೀಕರಿಸುವ ಗುರಿಯನ್ನು ಹೊಂದಿದೆ. ಪ್ರತಿ ತಿಂಗಳು ಮೊದಲ ದಿನದಿಂದ ಹೊಸ ಹೊಸ ನಿಯಮಗಳು, ತೆರಿಗೆ ಪರಿಷ್ಕರಣೆ ಸೇರಿ ಹಲವು ಆಡಳಿತ ಸುಧಾರಣೆ ಕ್ರಮಗಳು ಜಾರಿಗೊಳ್ಳುವುದು ವಾಡಿಕೆ. ಅದರಂತೆ ಅಕ್ಟೋಬರ್ 1 ರಿಂದ ಆದಾಯ ತೆರಿಗೆ ಸಂಬಂಧಿಸಿ 6 ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ.