Astrology
ಮುಂದಿನ ವರ್ಷ ಸಂಭವಿಸಲಿರುವ ಸೂರ್ಯ ಗ್ರಹಣ, ಚಂದ್ರ ಗ್ರಹಣಗಳ ವಿವರ; ಭಾರತದಲ್ಲಿ ಗೋಚರಿಸುವ ಗ್ರಹಣ ಯಾವುದು?

ಸೂರ್ಯ ಗ್ರಹಣ 2025
2025ರ ಮೊದಲ ಸೂರ್ಯಗ್ರಹಣ ಮಾರ್ಚ್ 29, ಶನಿವಾರ ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಆದರೆ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಬರ್ಮುಡಾ, ಬಾರ್ಬಡೋಸ್, ಡೆನ್ಮಾರ್ಕ್, ಆಸ್ಟ್ರಿಯಾ, ಬೆಲ್ಜಿಯಂ, ಉತ್ತರ ಬ್ರೆಜಿಲ್, ಫಿನ್ಲ್ಯಾಂಡ್, ಜರ್ಮನಿ, ಫ್ರಾನ್ಸ್, ಹಂಗೇರಿ, ಐರ್ಲೆಂಡ್, ಮೊರಾಕೊ, ಗ್ರೀನ್ಲ್ಯಾಂಡ್, ಪೂರ್ವ ಕೆನಡಾ, ಲಿಥುವೇನಿಯಾ, ಹಾಲೆಂಡ್ ದೇಶಗಳಲ್ಲಿ ಈ ಸೂರ್ಯಗ್ರಹಣವನ್ನು ನೋಡಬಹುದು.