Latest Kannada Nation & World
ಅತ್ತ ಪೀತಿಸಿದ ತಾಂಡವ್ ಇಲ್ಲ, ಇತ್ತ ಉಳಿಯಲು ಮನೆಯೂ ಇಲ್ಲ, ಸಿಟ್ಟಿನಿಂದ ಕುದಿಯುತ್ತಿರುವ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಶ್ರೇಷ್ಠಾಳನ್ನು ಮನೆಯಿಂದ ಹೊರ ಹಾಕಿದ ಓನರ್
ಇತ್ತ ಶ್ರೇಷ್ಠಾ ಕೋಪ, ನಿರಾಶೆಯಿಂದ ಮನೆಗೆ ವಾಪಸ್ ಆಗುತ್ತಾಳೆ. ಆದರೆ ಅಲ್ಲಿ ತನ್ನ ಲಗ್ಗೇಜ್ಗಳೆಲ್ಲಾ ಹೊರಗೆ ಬಿದ್ದಿರುವುದನ್ನು ನೋಡಿ ಶಾಕ್ ಆಗುತ್ತಾಳೆ. ಏನು ಇದೆಲ್ಲಾ ಎಂದು ಕೇಳಿದಾಗ ನೀನೇ ತಾನೇ , ನಾನು ಮನೆ ಬಿಟ್ಟು ಹೋಗುತ್ತೇನೆ ದುಡ್ಡು ಕೊಡಿ ಅಂತ ಕೇಳಿದ್ದು, ದುಡ್ಡು ತೆಗೆದುಕೊಂಡು ಇಲ್ಲಿಂದ ಹೋಗು ಎಂದು ಓನರ್ ಹೇಳುತ್ತಾರೆ. ಇದ್ದಕ್ಕಿದ್ದಂತೆ ಹೋಗು ಎಂದರೆ ನಾನು ಎಲ್ಲಿಗೆ ಹೋಗಲಿ, ಮೊದಲೇ ಹೇಳಬೇಕು ತಾನೇ ಎಂದು ಶ್ರೇಷ್ಠಾ ಪ್ರಶ್ನಿಸುತ್ತಾಳೆ. ನೀನು ಮಾಡಿದ್ದು ಕೂಡಾ ಹಾಗೇ ತಾನೇ, ಇದ್ದಕ್ಕಿದ್ದಂತೆ ರಾತ್ರಿ ಬಂದು ಮನೆ ಖಾಲಿ ಮಾಡುತ್ತೇನೆ ಎಂದರೆ ನಾವು ಏನು ಮಾಡಬೇಕು, ದುಡ್ಡು ಕೇಳಿದ್ದೆಯಲ್ಲ ತೆಗೆದುಕೊಂಡು ಹೋಗುತ್ತಿರು ಎಂದು ಶ್ರೇಷ್ಠಾಗೆ ಹೇಳುತ್ತಾಳೆ.